ಒತ್ತಡ ಮುಕ್ತ ಬದುಕಿಗೆ ಯೋಗ ದಿವ್ಯೌಷಧ : ಡಾ. ಉಮೇಶ ಪುರದ

0
Charity lecture programme
Spread the love

ವಿಜಯಸಾಕ್ಷಿ ಸುದ್ದಿ, ಗದಗ : ದೇಹವನ್ನು ರೋಗಮುಕ್ತಗೊಳಿಸಿ, ಮನಸ್ಸನ್ನು ಶಾಂತಗೊಳಿಸಿ, ಜೀವನದ ಔನ್ನತ್ಯವನ್ನು ಸಾಧಿಸಲು ಭಾರತೀಯರು ಕಂಡುಹಿಡಿದ ಅಧ್ಭುತ ಕಲೆ ಯೋಗವಾಗಿದೆ. ಪತಂಜಲಿ ಮಹರ್ಷಿಗಳು ಸಂಶೋಧನೆಯ ಮೂಲಕ ದೇಹ ಮತ್ತು ಮನಸ್ಸಿನ ಆರೋಗ್ಯಕ್ಕೆ ಹಲವಾರು ಸೂತ್ರಗಳನ್ನು ತಿಳಿಸಿದ್ದಾರೆ. ಅವುಗಳನ್ನು ಅರಿತು ಆಚರಿಸುವದರ ಮೂಲಕ ಸ್ವಸ್ಥ ಸಮಾಜವನ್ನು ರೂಪಿಸಬಹುದಾಗಿದೆ. ಎಂದು ಆಯುರ್ವೇದ ತಜ್ಞ ಡಾ. ಉಮೇಶ ಪುರದ ತಿಳಿಸಿದರು.

Advertisement

ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಬಸವಯೋಗ ಮಂದಿರದಲ್ಲಿ ಡಾ. ಎಸ್.ಕೆ. ಪಲ್ಲೇದ ಸ್ಮರಣೆಯಲ್ಲಿ ಜರುಗಿದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆಹಾರವೇ ಔಷಧಿಯಾಗಿದ್ದು, ವಾತ, ಪಿತ್ತ, ಕಫ ದೋಷದಿಂದ ಉಂಟಾಗುವ ರೋಗ-ರುಜಿನಗಳನ್ನು ಪ್ರಕೃತಿಯಲ್ಲಿ ಸಿಗುವ ಸಸ್ಯಗಳಿಂದಲೇ ನಿವಾರಿಸಬಹುದಾಗಿದೆ. ಆದಾಯದ ಬಹುಪಾಲು ಆಸ್ಪತ್ರೆಗೆ ವ್ಯಯ ಮಾಡದೇ ನಿತ್ಯಕರ್ಮವಾಗಿ ಯೋಗಾಸನ ಮತ್ತು ಪ್ರಾಣಾಯಾಮಗಳನ್ನು ರೂಢಿಸಿಕೊಳ್ಳುವದು ಇಂದಿನ ಅನಿವಾರ್ಯವಾಗಿದೆ ಎಂದು ತಿಳಿಸಿದರು.

ಕಿರಿಯ ವಯಸ್ಸಿಲ್ಲಿಯೇ ಯೋಗ ಮತ್ತು ಆಯುರ್ವೇದ ಕುರಿತು ಸಾಧನೆಯನ್ನು ಮಾಡಿ ಭೌತಿಕವಾಗಿ ಅಗಲಿರುವ ಡಾ. ಶರಣಬಸಪ್ಪ ಪಲ್ಲೇದ ಅವರ ಜೀವನ ಸಾಧನೆ ಕುರಿತು ಡಾ. ದತ್ತಪ್ರಸನ್ನ ಪಾಟೀಲ ಮಾತನಾಡಿದರು. ದತ್ತಿ ದಾನಿಗಳು ಹಾಗೂ ಬಸವ ಯೋಗ ಮಹಾವಿದ್ಯಾಲಯದ ಪ್ರಾಚಾರ್ಯರಾದ ಯೋಗಾಚಾರ್ಯ ಕೆ.ಎಸ್. ಪಲ್ಲೇದ ಅವರು ವೇದಿಕೆ ಮೇಲೆ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಬಸವ ಯೋಗ ಮಹಾವಿದ್ಯಾಲಯ ಹಾಗೂ ಯೋಗ ಸಂಘಟನೆಗಳಿಂದ ವಾರವಿಡೀ ಜರುಗಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಸ್ಪರ್ಧಾಳುಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.

ಯೋಗ ಶಿಬಿರದ ಯಶಸ್ಸಿಗೆ ಶ್ರಮಿಸಿದ ಸಂಪನ್ಮೂಲ ವ್ಯಕ್ತಿಗಳನ್ನು ಗೌರವಿಸಲಾಯಿತು.
ಡಿ.ಎಸ್. ಬಾಪುರಿ ಸ್ವಾಗತಿಸಿದರು. ಶಾರದಾ ಕಾತರಕಿ ನಿರೂಪಿಸಿದರು. ದತ್ತಪ್ರಸನ್ನ ಪಾಟೀಲ ವಂದಿಸಿದರು.

ಕಾರ್ಯಕ್ರಮದಲ್ಲಿ ಕೆ.ಎಚ್. ಬೇಲೂರ, ಡಾ. ಕಲ್ಲೇಶ ಮೂರಶಿಳ್ಳಿನ, ಡಾ. ರಾಜಶೇಖರ ದಾನರಡ್ಡಿ, ವೀರಪ್ಪ ಸವಡಿ, ಡಾ. ಅಶೋಕ ಮತ್ತಿಗಟ್ಟಿ, ಬಸವರಾಜ ವಾರಿ, ಎಂ.ಬಿ. ಕಿತ್ತೂರ, ಬಸವರಾಜ ಹಳ್ಳಿ, ದ್ಯಾಮಣ್ಣ ನರೇಗಲ್, ಪ್ರಕಾಶ ಮದ್ದಿನ, ರವಿ ಉಮಚಗಿ, ಸಂದೀಪ ನಡಗೇರಿ, ವಿಜಯಲಕ್ಷ್ಮಿ ಮೇಕಳಿ, ಸುಪ್ರಿಯಾ ಇಟಗಿ, ರತ್ನಾ ಪುರಂತರ, ಸುಮನ ಪಾಟೀಲ, ಗಿರಿಜಾ ನಾಲತ್ವಾಡಮಠ, ಸುಧಾ ಬಳ್ಳಿ, ಮಂಜುಳಾ ಇಟಗಿ, ಮಹಾದೇವಿ ಚರಂತಿಮಠ, ಅನ್ನಪೂರ್ಣ ಅಸೂಟಿ, ಎಂ.ಡಿ. ಹೊನ್ನಗುಡಿ, ಸುನಂದಾ ಅರಹುಣಸಿ, ಶಶಿಕಲಾ ಬೆಲ್ಲದ, ಶಾಂತಾ ಕುಂದಗೋಳ, ಎಸ್.ಎಸ್. ಮಾಲಶೆಟ್ಟಿ, ಅರುಣಾ ಇಂಗಳಳ್ಳಿ, ಲಲಿತಾ ಅಣ್ಣಿಗೇರಿ, ಕಸ್ತೂರಿ ಮರಿಗೌಡರ, ಪ್ರತಿಭಾ, ಪ್ರೇಮಾ ಹೊನ್ನಗುಡಿ, ದೀಪಾ, ಸುಪ್ರಿಯಾ, ಸುಧಾ ಪಾಟೀಲ, ಸುಮಂಗಲಾ ಹದ್ಲಿ, ಪುಷ್ಟಾ ತಿಪ್ಪಶೆಟ್ಟಿ, ಎಸ್.ಬಿ. ಮೆಣಸಗಿ, ವಿ.ಎಸ್. ದಲಾಲಿ, ಪ್ರ.ತೋ. ನಾರಾಯಣಪೂರ, ಯಶವಂತ ಮತ್ತೂರ, ಎಸ್.ಜೆ. ಸಂಜೀವಸ್ವಾಮಿ, ಗೌರಿ ಜೀರಂಕಳ್ಳಿ, ಸುನಂದಾ ಜ್ಞಾನೋಪಂತರ, ಡಾ. ವಿ.ಬಿ. ಮೇಟಿ, ಮಹಾಂತೇಶ ಪಿಡ್ಡನಗೌಡ್ರ, ಜಯಶ್ರೀ ಡಾವಣಗೇರಿ, ಅಮರೇಶರಾಂಪೂರ, ಅರ್ಜುನ ಸಿಂಗಟರಾಯನಕೇರಿ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ನಮ್ಮ ಹಿರಿಯರು ಪ್ರಕೃತಿಯನ್ನು ಅವಲೋಕಿಸಿ, ಸಂಶೋಧಿಸಿ ದೀರ್ಘಾಯುಷ್ಯವನ್ನು ಹೊಂದಲು ಸಹಾಯಕವಾಗುವ ಕಲೆಯನ್ನು ಯೋಗ ಮತ್ತು ಆಯುರ್ವೇದದ ಮೂಲಕ ನೀಡಿದ್ದಾರೆ. ಸ್ವಸ್ಥವಾದ ದೇಹದಲ್ಲಿ ಸ್ವಸ್ಥ ಮನಸ್ಸು ನೆಲೆಗೊಳ್ಳಲು ಸಾಧ್ಯ. ಮನಸ್ಸು ಮನುಷ್ಯನ ಹತೋಟಿಯಲ್ಲಿದ್ದಾಗ ಸಾಧನೆ ಸುಲಭವಾಗುತ್ತದೆ. ಈ ದಿಸೆಯಲ್ಲಿ ಮಕ್ಕಳಿಗೆ ಯೋಗ ಶಿಕ್ಷಣವನ್ನು ನಿಯಮಿತವಾಗಿ ರೂಢಿಸುವ ಅವಶ್ಯಕತೆ ಇದೆ ಎಂದು ತಿಳಿಸಿದರು.

 


Spread the love

LEAVE A REPLY

Please enter your comment!
Please enter your name here