HomeGadag Newsತೋಂ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸಂಗೀತ ದಿನಾಚರಣೆ

ತೋಂ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸಂಗೀತ ದಿನಾಚರಣೆ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ನಗರದ ತೋಂಟದಾರ್ಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಸಂಗೀತ ದಿನವನ್ನು ಆಚರಿಸಲಾಯಿತು. ಸಾಂಸ್ಕೃತಿಕ ಸಮಿತಿಯು ಆಯೋಜಿಸಿದ್ದ ಈ ಕಾರ್ಯಕ್ರಮವು ವಿದ್ಯಾರ್ಥಿಗಳ ಸಂಗೀತ ಪ್ರತಿಭೆಗಳನ್ನು ಹೊರತರಲು ಒಂದು ಅನನ್ಯ ವೇದಿಕೆಯಾಯಿತು.

ಪ್ರೊ. ಮಲ್ಲಿಕಾರ್ಜುನ ಜಿ.ಡಿ. ಮತ್ತು ಪ್ರೊ. ತೆಹಸಿನ್ ಶಿಗ್ಲಿ ಸಂಗೀತ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳೊಂದಿಗೆ ಜಾಗೃತಿ ಜಾಥಾ ನಡೆಸಿದರು.

ಪ್ರಾಂಶುಪಾಲ ಡಾ. ಎಮ್.ಎಮ್. ಅವಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜಗದೀಶ ಶಿವನಗುತ್ತಿ ಮತ್ತು ಪ್ರೊ. ಸಂತೋಷಕುಮಾರ್ ಜಿ.ಎಂ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಂದ ಗಾಯನ, ವಾದನ ಹಾಗೂ ನೃತ್ಯ ಪ್ರದರ್ಶನ ನಡೆಯಿತು.

ಕಾಲೇಜಿನ ಎಲೆಕ್ಟಿçಕಲ್ ವಿಭಾಗದ ಮುಖ್ಯಸ್ಥ ಡಾ. ಈರಣ್ಣ ಕೋರಚಗಾಂವ `ಸಂಗೀತ ಮತ್ತು ಮಾನಸಿಕ ಆರೋಗ್ಯ’ ವಿಷಯದ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ತಮ್ಮ ಅನುಭವವನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಪ್ರೊ. ಗೌತಮ ರೇವಣಕರ, ಪ್ರೊ. ದಯಾನಂದ ಗೌಡರ, ಪ್ರೊ. ಲೋಕೇಶ, ಪ್ರೊ. ರಮೇಶ ಬಡಿಗೇರ, ಪ್ರೊ. ಆರ್.ವಿ. ಕಡಿ, ಪ್ರೊ. ಐ.ಎಸ್. ಪಾಟೀಲ, ಪ್ರೊ. ಅಶ್ವಿನಿ ಅರಳಿ, ಪ್ರೊ. ಮಧುಸೂಧನ ಕುಲಕರ್ಣಿ, ಪ್ರೊ. ಶೈಲಜಾ ಮುದೇನಗುಡಿ, ಪ್ರೊ. ಪ್ರಸನ್ನ ನಾಡಗೌಡ, ಪ್ರೊ. ಸುನೀಲ ಪಾಟೀಲ್, ಪ್ರೊ. ವೀರೇಶ ಮಾಗಳದ, ಪ್ರೊ. ವಿಜಯಕುಮಾರ ಮಾಲಗಿತ್ತಿ, ಪ್ರೊ. ಮಹಾಂತ ಕಟ್ಟಿಮನಿ, ಪ್ರೊ. ಶಶಿಧರಗೌಡ ಸೇರಿದಂತೆ ಶಿಕ್ಷಕರು ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img