ವಿಜಯಸಾಕ್ಷಿ ಸುದ್ದಿ, ನರೇಗಲ್ : ಪಟ್ಟಣದ ಶ್ರೀ ಬಸವೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಭಾಷಣ, ಪ್ರಬಂಧ ಮತ್ತು ಚರ್ಚಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಮುಖ್ಯೋಪಾಧ್ಯಾಯೆ ಬಿ.ಜಿ. ಶಿರ್ಸಿಯವರು ಕೆಂಪೆಗೌಡರ ವ್ಯಕ್ತಿತ್ವ, ಆಡಳಿತ ವ್ಯವಸ್ಥೆ ಹಾಗೂ ಅವರು ಕೈಗೊಂಡ ಅಭಿವೃದ್ಧಿ ಕಾರ್ಯಗಳ ಕುರಿತು ಮಾತನಾಡಿದರು.
ಶಿಕ್ಷಕ ವೃಂದದ ಎಂ.ವಿ. ಕಡೆತೋಟದ, ಪೂರ್ಣಿಮಾ ಅಂಗಡಿ, ಎಸ್.ವಿ. ಹಿರೇಮಠ, ಎಸ್.ಕೆ ಕುಲಕರ್ಣಿ, ವಿ.ಪಿ. ಗ್ರಾಮಪುರೋಹಿತ, ಎಸ್.ಎಚ್. ಮಾನ್ವಿ, ಎಮ್.ಎಮ್. ಸಿಳ್ಳಿನ್, ಗೀತಾ ಶಿಂಧೆ, ಎನ್.ಜೆ. ಸಂಗನಾಳ, ಜೆ.ವಿ. ಕೆರಿಯವರ, ಅಕ್ಕಮಹಾದೇವಿ ಅಯ್ಯನಗೌಡ್ರ, ಕೆ.ಆಯ್. ಕೋಳಿವಾಡ, ಆಯ್.ಬಿ. ಒಂಟೇಲಿ, ರಾಜೇಶ್ವರಿ ಈಟಿ, ಗೀತಾ ಕಂಬಳಿ, ರಜಿಯಾಬೇಗಂ, ನಯನಾ ಜೋಳದ, ವಿದ್ಯಾ ಮುಗಳಿ, ಜಯಶ್ರೀ ಮೆಣಸಗಿ, ವೀಣಾ ಯಾಳಗಿ ಮುಂತಾದವರಿದ್ದರು.