HomeGadag Newsಪ್ರತಿಭಾ ಪುರಸ್ಕಾರ, ಸಂಸದರಿಗೆ ಸನ್ಮಾನ ಜು.7ಕ್ಕೆ

ಪ್ರತಿಭಾ ಪುರಸ್ಕಾರ, ಸಂಸದರಿಗೆ ಸನ್ಮಾನ ಜು.7ಕ್ಕೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಅಖಿಲ ಭಾರತ ಗಾಣಿಗ ವಿದ್ಯಾ ಹಾಗೂ ಉದ್ಯೋಗವರ್ಧಕ ಟ್ರಸ್ಟ್ ವತಿಯಿಂದ ಪ್ರತಿಭಾ ಪುರಸ್ಕಾರ, ನೂತನ ಸಂಸದರು ಹಾಗೂ ಗಾಣಿಗ ಭವನ ಕಟ್ಟಡಕ್ಕೆ ದೇಣಿಗೆ ನೀಡಿದ ದಾನಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಜುಲೈ 7ರಂದು ಬೆಳಗ್ಗೆ 10.30ಕ್ಕೆ ಗಾಣಿಗ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಗಾಣಿಗ ಸಮಾಜದ ಅಧ್ಯಕ್ಷ ಬಸವರಾಜ ಬಿಂಗಿ ತಿಳಿಸಿದರು.

ಬುಧವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾರ್ಯಕ್ರಮದ ಸಾನ್ನಿಧ್ಯವನ್ನು ವಿಜಯಪುರ ಗಾಣಿಗ ಗುರುಪೀಠದ ಡಾ. ಜಯ ಬಸವಕುಮಾರ ಸ್ವಾಮೀಜಿ ವಹಿಸುವರು. ಅಥಣಿ ಶಾಸಕ ಲಕ್ಷ್ಮಣ ಸವದಿ ಅಧ್ಯಕ್ಷತೆ ವಹಿಸುವರು. ನೂತನ ಸಂಸದರಾದ ಬಸವರಾಜ ಬೊಮ್ಮಾಯಿ, ಪಿ.ಸಿ. ಗದ್ದಿಗೌಡರ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಚಂದ್ರಪ್ಪ ಕರಿಕಟ್ಟಿ ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಗಾಣಿಗ ಸಮಾಜದ ಗೌರವಾಧ್ಯಕ್ಷ ಷಣ್ಮುಖಪ್ಪ ಬಡ್ನಿ, ನಿಂಗಪ್ಪ ಕೆಂಗಾರ, ಡಾ. ಶೇಖರ ಸಜ್ಜನರ, ಬಿ.ಬಿ. ಐನಾಪುರ, ಬಸವರಾಜ ನವಲಗುಂದ, ಎಚ್.ಬಿ. ಕೋರಗಲ್, ರಮೇಶ ಕಪ್ಪತ್ತನವರ, ಸುಭಾಸ್ ಬಟಕುರ್ತಿ ಆಗಮಿಸಲಿದ್ದಾರೆ ಎಂದರು.

ಸಮಾಜದ 100 ಜನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಗುವುದು. ಸುಮಾರು 2 ಸಾವಿರಕ್ಕೂ ಹೆಚ್ಚು ಸಮಾಜ ಬಾಂಧವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಸಮಾಜದ ಪ್ರಮುಖರಾದ ಗಿರಿಯಪ್ಪ ಅಸೂಟಿ, ಶ್ರೀಕಾಂತ ಲಕ್ಕುಂಡಿ, ಸುರೇಶ ಮರಳಪ್ಪನವರ, ಫಕೀರೇಶ ಸಿಂದಗಿ, ತೋಟಪ್ಪ ಗಾಣಿಗೇರ, ಶಿವಣ್ಣ ಹಿಟ್ನಳ್ಳಿ, ಈಶ್ವರಪ್ಪ ಕಿರೇಸೂರ, ಕೆ.ಎನ್. ಪಾಟೀಲ, ಶರಣಗೌಡ ಪಾವಾಡಿಗ ಮುಂತಾದವರಿದ್ದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!