ಗದಗ ನಗರದ ಸುಪ್ರಸಿದ್ಧ ವೀರನಾರಾಯಣ ದೇವಸ್ಥಾನಕ್ಕೆ ಬಂದಿದ್ದ ಭಕ್ತರೊಬ್ಬರು ತಮ್ಮ ಬ್ಯಾಗ್ ಸೇರಿದಂತೆ ಮೊಬೈಲ್ ಕಳೆದುಕೊಂಡಿದ್ದರು. ಕರ್ತವ್ಯದಲ್ಲಿದ್ದ ಹೋಮಗಾರ್ಡ್ಗಳಾದ ಸರಿತಾ ಬುಟ್ಟಿ ಕೊರವರ, ಭಾರತಿ ಕಬಾಡಿ ಇವರಿಗೆ ಬ್ಯಾಗ್ ಸಿಕ್ಕಿದ್ದು, ಸುರಕ್ಷಿತವಾಗಿ ವಾರಸುದಾರರಿಗೆ ಮುಟ್ಟಿಸಿ ತಮ್ಮ ಪ್ರಾಮಾಣಿಕತೆ ಮೆರೆದಿದ್ದಾರೆ.