HomeGadag Newsಆಲೂರು ವೆಂಕಟರಾಯರ ಜಯಂತ್ಯುತ್ಸವ ಆಚರಣೆ

ಆಲೂರು ವೆಂಕಟರಾಯರ ಜಯಂತ್ಯುತ್ಸವ ಆಚರಣೆ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ರೋಣ ತಾಲೂಕಾಧ್ಯಕ್ಷ ಎಂ.ಎಚ್. ನದಾಫ್ ನೇತೃತ್ವದಲ್ಲಿ ಶ್ರೀ ಆಲೂರು ವೆಂಕಟರಾಯರ ವೃತ್ತದಲ್ಲಿ ಶ್ರೀ ಆಲೂರು ವೆಂಕಟರಾಯರ 144ನೇ ಜಯಂತ್ಯುತ್ಸವವನ್ನು ನೆರವೇರಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಸರಕಾರಿ ಪಾಲಿಟೆಕ್ನಿಕ್‌ನ ಆವರಣದಲ್ಲಿ ಸಸಿ ನಡೆಸುವ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಶ್ರೀ ಎಚ್ಚರೇಶ್ವರ ಮಹಾಸ್ವಾಮಿಗಳು, ದಿವಾನ್ ಶರೀಫ್ ಮುರುಗೇಂದ್ರ ಶ್ರೀಗಳು, ಹಜರತ ಪೀರ್ ಶ್ರೀ ಎಮ್.ಆರ್. ಖಾನ್ ಬಾಬಾ ಗುರುಗಳು ದಿವ್ಯ ಸಾನ್ನಿಧ್ಯ ವಹಿಸಿದ್ದರು.

ವೇದಿಕೆಯ ಪದಾಧಿಕಾರಿಗಳಾದ ಬಸವರಾಜ್ ಹಾದಿಮನಿ, ಮುರ್ತುಜಾ ಗೌಂಡಿ, ಪ್ರಾಂಶುಪಾಲ ವಿನೋದ ಸೋನಕರ, ಶರೀಫ್ ನದಾರ್ಪ, ಸಂಕೇತ್ ದಾನರೆಡ್ಡಿ, ಸಂಜು ಮಾದರ, ಕಾರ್ತಿಕ್ ಬಡಿಗೇರ್, ಲಿಯಾಖತ್ ಅಂಗಡಗೇರಿ, ಶಂಕ್ರಪ್ಪಾ ತೆಗ್ಗಿ, ಪರಶುರಾಮ್ ನಾಯ್ಕರ್, ಯಮನೂರುಸಾಬ್ ನದಾಫ್, ಸಂತೋಷ್ ರಾಜಪುರೋಹಿತ್, ರಿಜ್ವಾನ್ ಮುಲ್ಲಾ, ಶರಣಪ್ಪ ಪೂಜಾರ, ಹನುಮಂತ್ ಗುಳೇದಗುಡ್ಡ, ಮೈಬ ನದಾರ್ಪ, ನೂರಸಾಬ ನದಾರ್ಪ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img