ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಟ್ರಾಕ್ಟರ್ ಓವರ್ಟೆಕ್ ಮಾಡುವ ವೇಳೆ ಸಾರಿಗೆ ಬಸ್, ಕಾರ್ ಹಾಗೂ ಟ್ರಾಕ್ಟರ್ ನಡುವೆ ಸರಣಿ ಅಪಘಾತ ಆಗಿರುವ ಘಟನೆ ದಂಡಿನ ದುರ್ಗಮ್ಮ ದೇವಸ್ಥಾನದ ಬಳಿ ನಡೆದಿದೆ.
ರೋಣದಿಂದ ಗದಗದ ಕಡೆಗೆ ಬರುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ಚಾಲಕ, ನೀರಲಗಿಯಿಂದ ನಾಗಸಮುದ್ರ ಕಡೆಗೆ ಹೊರಟ್ಟಿದ್ದ ಟ್ರಾಕ್ಟರ್ನ್ನು ಓವರ್ಟೆಕ್ ಮಾಡುವ ವೇಳೆ ಈ ಘಟನೆ ನಡೆದಿದೆ.
ಈ ಸಮಯದಲ್ಲಿ ಗದಗದಿಂದ ರೋಣಕ್ಕೆ ಹೊರಟಿದ್ದ ಡಸ್ಟರ್ ಕಾರ್ ಹಾಗೂ ಟ್ರಾಕ್ಟರ್ಗೆ ಸಾರಿಗೆ ಬಸ್ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಕಾರ್ನಲ್ಲಿದ್ದ 4 ಜನರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಟ್ರಾಫಿಕ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
Advertisement