ತ್ಯಾಗ-ಬಲಿದಾನ ಪ್ರತೀಕ ಮೊಹರಂ ಆಚರಣೆ

0
The Moharram celebration symbolizes sacrifice and sacrifice
Spread the love

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ : ತ್ಯಾಗ, ಬಲಿದಾನದ ಪ್ರತೀಕವಾಗಿರುವ ಹಿಂದೂ-ಮುಸಲ್ಮಾನ ಭಾಂದವರ ಭಾವೈಕ್ಯತೆಯ ಮೊಹರಂ ಹಬ್ಬವನ್ನು ಲಕ್ಕುಂಡಿಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು.

Advertisement

ಮೊಹರಂ ಹಬ್ಬದ ಕೊನೆಯ ದಿನವಾದ ಬುಧವಾರ ವಿವಿಧ ಮಸೂತಿಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಆಲೆ ದೇವರು ಮತ್ತು ಪಾಂಜಾ ದೇವರನ್ನು ಬಜಾರ ರಸ್ತೆಯಲ್ಲಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ಪಾಲ್ಗೊಂಡ ಜಂದೇಶಾವಲಿ, ಲಾಲಶಾವಲಿ ಮತ್ತು ಮರುಳಸಿದ್ದೇಶ್ವರ ಹೆಜ್ಜೆ ಮೇಳದ ಕುಣಿತವು ಗಮನ ಸೆಳೆಯಿತು.

The Moharram celebration symbolizes sacrifice and sacrifice

ವಿರೂಪಾಕ್ಷೇಶ್ವರ ದೇವಸ್ಥಾನದ ಮುಂದೆ ಎಲ್ಲ ದೇವರು ಸಂಗಮಗೊಂಡ ನಂತರ ಪ್ರಾರ್ಥನೆ ಸಲ್ಲಿಸಲಾಯಿತು.
ನಂತರ ಮತ್ತೆ ಸಂಜೆ ಮೆರವಣಿಗೆಯಲ್ಲಿ ದೇವರುಗಳನ್ನು ಗಾಣಗೇರ ಮನೆಯ ಮುಂದೆ ಸಂಗಮಗೊಂಡು ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ದುರ್ಗಾದೇವಿ ಕೆರೆಗೆ ತೆರಳಿ ವಿಧಿ ವಿಧಾನಗಳೊಂದಿಗೆ ಪ್ರಾರ್ಥನೆ ಸಲ್ಲಿಸಿ ಸಾಂಪ್ರದಾಯಿಕವಾಗಿ ವಿಸರ್ಜನೆ ಮಾಡಲಾಯಿತು.

9 ದಿನ ಕತ್ತಲ ರಾತ್ರಿ ಆಚರಣೆಯಲ್ಲಿ ಸರಕಾರಿ ಹಿರೇಮಸೂತಿ ಅಗ್ನಿ ಹಾಯುವುದು ಮತ್ತು 7 ದಿನದ ಸವಾರಿಯಲ್ಲಿ ಲಾಲಶಾವಲಿ ಮಸೂತಿಯ ಆವರಣದಲ್ಲಿ ಅಗ್ನಿ ಹಾಯುವ ಕಾರ್ಯಕ್ರಮ ಶೃದ್ಧಾ ಭಕ್ತಿಯಿಂದ ನೆರವೇರಿತು. 8 ದಿನದ ಸವಾರಿಯಲ್ಲಿ ಗಂಧ ಲೇಪನ ಮಾಡಲಾಯಿತು. ಮಸೂತಿಯಲ್ಲಿ ಪ್ರತಿಷ್ಠಾಪನೆಗೊಂಡ ದೇವರುಗಳಿಗೆ ಹಿಂದೂ-ಮುಸಲ್ಮಾನ ಭಾಂದವರು ನೈವೇದ್ಯವನ್ನು (ಸಕ್ಕರೆ) ಅರ್ಪಿಸಿದರು. ಹಜರತ್ ಮೌಲಾಲಿ ಮತ್ತು ಬೇಬಿಫಾತಿಮಾರ ಮಕ್ಕಳಾದ ಇಮಾಮ ಹಸೇನ ಮತ್ತು ಇಮಾಮ ಹುಸೇನರು ಧರ್ಮದ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಪ್ರತೀಕವಾಗಿ ಮೊಹರಂ ಹಬ್ಬವನ್ನು ಆಚರಿಸಲಾಗುತ್ತಿದೆ ಎಂದು ಖಾಜಾಸಾಬ ಮುಲ್ಲಾ ಹೇಳಿದರು.


Spread the love

LEAVE A REPLY

Please enter your comment!
Please enter your name here