Homekoppalಮಕ್ಕಳನ್ನು ತಿದ್ದಬೇಕಾದ ಪ್ರಿನ್ಸಿಪಾಲ್ ಬಣ್ಣ ಬಯಲು!

ಮಕ್ಕಳನ್ನು ತಿದ್ದಬೇಕಾದ ಪ್ರಿನ್ಸಿಪಾಲ್ ಬಣ್ಣ ಬಯಲು!

Spread the love

ಬಿಯಸ್ಕೆ.
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ
ಮಕ್ಕಳು ತಪ್ಪು ಮಾಡಿದರೆ ತಿದ್ದಿ-ಬುದ್ಧಿ ಹೇಳಬೇಕಾದ ಪ್ರಾಧ್ಯಾಪಕರೇ ದಾರಿ ತಪ್ಪಿದರೆ..? ಈ ಪ್ರಶ್ನೆಯೊಂದೇ ಸಾಕು ಪಾಲಕರ ಭಯಕ್ಕೆ.. ಇಂಥ ವಾತಾವರಣ ಕೊಪ್ಪಳದ ಮಹಿಳಾ ಪದವಿ ಕಾಲೇಜಿನಲ್ಲಿ ತಲೆದೋರಿದೆ. ಬುಧವಾರ ಕಾಲೇಜಿನ ಪ್ರಿನ್ಸಿಪಾಲ್ ಡಾ.ಗಣಪತಿ ಲಮಾಣಿಯವರನ್ನು ಸ್ಥಳೀಯರು ಹಿಗ್ಗಾ ಮುಗ್ಗಾ ತರಾಟೆಗೊಳಪಡಿಸಿದ ಘಟನೆ ಬಹಿರಂಗಗೊಂಡಿದೆ‌. ಆದರೆ ತಮ್ಮ ಮೇಲಿರುವ ಎಲ್ಲ ಆರೋಪಗಳು ಶುದ್ಧ ಸುಳ್ಳು, ನಿರಾಧಾರ ಎಂದು ಲಮಾಣಿಯವರು ಪ್ರತಿಕ್ರಿಯೆ ನೀಡಿದ್ದಾರೆ.
ಏನಿದು ಗಲಾಟೆ?: ಕೊಪ್ಪಳದ ಮಹಿಳಾ ಪದವಿ ಕಾಲೇಜು ಅಭಿವೃದ್ಧಿಗಾಗಿ‌ ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಸರಕಾರ ಅನುದಾನ ಬಿಡುಗಡೆಗೊಳಿಸಿದೆ. ಅನುದಾನದ‌‌ ವಿಷಯವಾಗಿ ಆಗದ ಹೊಂದಾಣಿಕೆ ಪ್ರಿನ್ಸಿಪಾಲ್ ಡಾ.ಗಣಪತಿ ಕೆ. ಲಮಾಣಿ ಮಾನ ಹರಾಜು ಆಗುವಂತೆ ಮಾಡಲಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಗಂಭೀರ ಆರೋಪ?
ಪ್ರಿನ್ಸಿಪಾಲ್ ಡಾ.ಗಣಪತಿ ಕೆ.ಲಮಾಣಿ ಹೊಂದಿದ್ದರು ಎನ್ನಲಾಗುತ್ತಿರುವ ಅನೈತಿಕ ಸಂಬಂಧ ಕಾಲೇಜಿನಲ್ಲೆಲ್ಲ ಪುಕಾರಾಗಿ ಜಿಲ್ಲಾಡಳಿತದ ಕಿವಿಗೂ ಬಿದ್ದಿದೆ ಎನ್ನಲಾಗಿದೆ. ಗ್ರೂಪ್-ಡಿ ನೌಕರರೊಬ್ಬಳ ಜೊತೆ ಪ್ರಿನ್ಸಿಪಾಲ್ ಕದ್ದು ಮುಚ್ಚಿ ಆಟ ಆಡುತ್ತಿದ್ದರು ಎಂಬ ಬಲವಾದ ಆರೋಪ ಕೇಳಿ ಬಂದಿದೆ.

ಡಾ.ಗಣಪತಿ ಲಮಾಣಿ ಅವರಿಗಿಂತ ಮುಂಚೆ ಈ ಕಾಲೇಜಿನ ಪ್ರಾಚಾರ್ಯನಾಗಿದ್ದೆ. ಲೆಕ್ಕ ಪರಿಶೋಧನೆ ಆಹ್ವಾನ ಇದ್ದುದರಿಂದ ಬಂದಿದ್ದೆ. ಬಂದ ಮೇಲೆ ಗೊತ್ತಾಯ್ತು, ಇಲ್ಲಿನ ಆಡಳಿತ ಸರಿ‌ ಇಲ್ಲ. ಯಾರು ಏನೇ ಮಾಹಿತಿ ಕೇಳಿದರೂ ಕೊಡಲ್ಲ. ಸಾಕಷ್ಟು ಗೋಲ್‌ಮಾಲ್ ಮಾಡಲಾಗಿದೆ ಎಂಬುದು. ಜಂಟೀ ನಿರ್ದೇಶಕರು ಈ ಪ್ರಕರಣದ ತನಿಖೆ ನಡೆಸಿ, ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿ.
-ಡಾ.ಗವಿಸಿದ್ದಪ್ಪ ಮುತ್ತಾಳ, ಪ್ರಾಚಾರ್ಯರು, ಸರಕಾರಿ ಪ್ರಥಮ ದರ್ಜೆ ಕಾಲೇಜು ಅಳವಂಡಿ.

ಜೊತೆಗೆ ಮಹಿಳಾ ಪ್ರಯಾಣಿಕರೊಬ್ಬರು ಬಸ್ ಇಳಿದ ತಕ್ಷಣ ನಿಸರ್ಗದ ಕರೆಗೆ ಸೂಕ್ತ ಸ್ಥಳ ಸಿಗದ ಕಾರಣ ಕಾಲೇಜಿನ ಆವರಣದ ಮೂಲೆಯಲ್ಲಿ ಮೂತ್ರ ವಿಸರ್ಜಿಸುತ್ತಿರುವ ಫೋಟೋವನ್ನು ಮೊಬೈಲ್‌ನಲ್ಲಿ ಸೆರೆ‌ಹಿಡಿದು, ಅವರನ್ನು ಬ್ಲ್ಯಾಕ್ ಮೇಲ್ ಮಾಡಿದ್ದಾರೆ ಎಂಬ ಗಂಭೀರ ಆರೋಪವೂ ಪ್ರಿನ್ಸಿಪಾಲ್ ಡಾ.ಗಣಪತಿ ಲಮಾಣಿ ಅವರ ಮೇಲಿದೆ.

ನನ್ನ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ. ನಾನು ಯಾವ ತಪ್ಪನ್ನು‌ ಮಾಡಿಲ್ಲ. ಪ್ರಾಮಾಣಿಕವಾಗಿ, ದಕ್ಷತೆಯಿಂದ ಕಾಲೇಜಿನಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಇಲಾಖೆಯ ಉನ್ನತಾಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಲಿ. ಕ್ರಮ ಎದುರಿಸಲು ಸಿದ್ಧ.
-ಡಾ.ಗಣಪತಿ.ಕೆ.ಲಮಾಣಿ, ಪ್ರಾಚಾರ್ಯರು, ಮಹಿಳಾ ಪದವಿ ಕಾಲೇಜು, ಕೊಪ್ಪಳ.

ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆಲ ಅತಿಥಿ ಉಪನ್ಯಾಸಕರ ಸಂಬಳವನ್ನು ನಾನಾ ಸುಳ್ಳು ಕಾರಣ ಹೇಳಿ, ಬೆದರಿಸಿ ಲಪಟಾಯಿಸಿದ್ದಾರೆ. ಸರಕಾರದ ಅನುದಾನವನ್ನು ದುರ್ಬಳಕೆ ಮಾಡಿದ್ದಾರೆ ಎನ್ನಲಾಗಿದೆ.
ಈ ಎಲ್ಲ ಪ್ರಶ್ನೆಗಳನ್ನು ಮುಂದಿಟ್ಟು ಉತ್ತರ ಕೇಳಿದಾಗ ತಡಬಡಾಯಿಸಿದ ಡಾ.ಗಣಪತಿ ಲಮಾಣಿ ಎಲ್ಲದಕ್ಕೂ ನಂದೇನು ತಪ್ಪಿಲ್ಲ ಎಂದಷ್ಟೇ ಉತ್ತರಿಸಿದರು. ಅವರ ವಿರುದ್ಧ ಏಕವಚನ, ಕೆಲ ಅಸಂವಿಧಾನಿಕ ಪದಗಳ ಬಳಕೆಯಾದರೂ ಸುಮ್ಮನೇ ಕೂತಿದ್ದರು. ಸುಮಾರು ಹೊತ್ತಿನ ಬಂತರ ವಾಗ್ವಾದ ಮಾಡಿದವರಿಗೆ ಕ್ಷಮೆಯಾಚಿಸಿದ ವಿಡಿಯೋ ಗಮನಿಸಿದರೆ ಹಲವು ಅನುಮಾನಗಳು ಹುಟ್ಟಿಕೊಳ್ಳುವುದಂತು ಸತ್ಯ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!