Home Crime News ಮದ್ಯ ಸೇವಿಸಿ ಹಳಿ ಮೇಲೆ ಮಲಗಿದ್ದ ಯುವಕರು: ರೈಲು ಹರಿದು ಮೂವರು ಸಾವು

ಮದ್ಯ ಸೇವಿಸಿ ಹಳಿ ಮೇಲೆ ಮಲಗಿದ್ದ ಯುವಕರು: ರೈಲು ಹರಿದು ಮೂವರು ಸಾವು

0
ಮದ್ಯ ಸೇವಿಸಿ ಹಳಿ ಮೇಲೆ ಮಲಗಿದ್ದ ಯುವಕರು: ರೈಲು ಹರಿದು ಮೂವರು ಸಾವು

ಕೊಪ್ಪಳ: ರೈಲ್ವೆ ಟ್ರ್ಯಾಕ್ ಮೇಲೆ ಮದ್ಯ ಸೇವಿಸಿ ಮಲಗಿದ್ದ ಯುವಕರ‌ ಮೇಲೆ ರೈಲ್ವೆ ಹರಿದು ಮೂವರು ಸಾವನ್ನಪ್ಪಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ನಡೆದಿದೆ.

ಮೌನೇಶ್ ಪತ್ತಾರ(23), ಸುನೀಲ್ (23), ವೆಂಕಟ ಭೀಮನಾಯ್ಕ (20) ಮೃತ ಯುವಕರಾಗಿದ್ದು,

ಕುಡಿತ ಮತ್ತಿನಲ್ಲಿ ರೇಲ್ವೆ ಟ್ರ್ಯಾಕ್ ಮೇಲೆ ಮಲಗಿದ್ದರು. ರೈಲ್ವೆ ಹುಬ್ಬಳ್ಳಿಯಿಂದ ಸಿಂಧನೂರಿಗೆ ತೆರಳುತ್ತಿತ್ತು. ನಿನ್ನೆ ರಾತ್ರಿ ನಡೆದ ಘಟನೆಯಾಗಿದ್ದು, ಗದಗ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

LEAVE A REPLY

Please enter your comment!
Please enter your name here