ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಮೂಲಕ ಮಿತಿಮೀರಿದ (ಓವರ್ಲೋಡ್) ಎಂ-ಸ್ಯಾಂಡ್ ಹಾಗೂ ಮರಳು ಸಾಗಣೆ ಮಾಡುತ್ತಿದ್ದ ವಾಹನಗಳ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ 3 ಟಿಪ್ಪರ್ಗಳು ಹಾಗೂ 1 ಲಾರಿಯನ್ನು ವಶಕ್ಕೆ ಪಡೆದಿದ್ದಾರೆ.
ಶುಕ್ರವಾರ ಮಧ್ಯರಾತ್ರಿಯಿಂದ ಶನಿವಾರ ನಸುಕಿನವರೆಗೆ ನಡೆದ ಕಾರ್ಯಾಚರಣೆಯಲ್ಲಿ, ಅಡರಕಟ್ಟಿ ಗ್ರಾಮದಿಂದ ಸುಮಾರು 5 ಟನ್ ಅಧಿಕ ಮರಳು ಸಾಗಿಸುತ್ತಿದ್ದ ಲಾರಿ, ಮಾಗಡಿ, ಹುಲ್ಲೂರು ಹಾಗೂ ಬೆಳ್ಳಟ್ಟಿ ಗ್ರಾಮಗಳಿಂದ ಹೆಚ್ಚುವರಿ ಎಂ-ಸ್ಯಾಂಡ್ ಹೊತ್ತೊಯ್ಯುತ್ತಿದ್ದ ಮೂರು ಟಿಪ್ಪರ್ಗಳನ್ನು ತಡೆದು ವಶಪಡಿಸಿಕೊಳ್ಳಲಾಯಿತು.
ಓವರ್ಲೋಡ್ ಸಾಗಣೆ ಕುರಿತು ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿಗಳಿಗೆ ಮಾಹಿತಿ ನೀಡಲಾಗಿದೆ.
ಕಾರ್ಯಾಚರಣೆಯಲ್ಲಿ ಪಿಎಸ್ಐ ನಾಗರಾಜ ಗಡದ, ಕ್ರೈಂ ಪಿಎಸ್ಐ ಟಿ.ಕೆ. ರಾಥೋಡ್ ಹಾಗೂ ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು.



