ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯ ಅಂತೂರು-ಬೆಂತೂರು ಗ್ರಾಮದಲ್ಲಿ ಲೋಕಕಲ್ಯಾಣಕ್ಕಾಗಿ 33 ದಿನಗಳ ಕಾಲ ಶಿವಯೋಗ ಸಮಾಧಿ ಅನುಷ್ಠಾನ ಕೈಗೊಂಡಿದ್ದ ಪೂಜ್ಯ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಆರೋಗ್ಯವನ್ನು ಶ್ರೀ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಪರಮಪೂಜ್ಯ ಡಾ. ಕಲ್ಲಯ್ಯಜ್ಜನವರು ಭೇಟಿ ನೀಡಿ ವಿಚಾರಿಸಿದರು.
ಈ ವೇಳೆ ರಾಚೋಟೇಶ್ವರ ಮಹಾಸ್ವಾಮಿಗಳ ದರ್ಶನ ಪಡೆದು ಆಶೀರ್ವಾದ ಹಾಗೂ ಶ್ರೀರಕ್ಷೆ ಸ್ವೀಕರಿಸಿದ ಕಲ್ಲಯ್ಯಜ್ಜನವರು, ಪರಮಾತ್ಮನ ಕೃಪೆಯಿಂದ ಶ್ರೀಗಳು ಶೀಘ್ರ ಸಂಪೂರ್ಣ ಗುಣಮುಖರಾಗಲಿ. ಸಮಾಜದಲ್ಲಿ ಸುಖ, ಶಾಂತಿ ಮತ್ತು ಲೋಕಕಲ್ಯಾಣ ನೆಲೆಸಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಗೌರವಾಧ್ಯಕ್ಷ ನಿಂಗನಗೌಡ ಎಸ್. ಮಾಲಿಪಾಟೀಲ, ರಾಹುಲ್ ತೆರದಾಳ, ಮಾರ್ಕಂಡಯ್ಯ ಆಟೋದ, ಬಸಯ್ಯ ಕೊಪ್ಪಳ, ಮುತ್ತು ಶಾಸ್ತ್ರಿ ಹಿರೇಕೊಪ್ಪ, ಮಾಂತೇಶ ಹಿರೇಮಠ, ಬಸಯ್ಯ ಹಿರೇಮಠ, ಪ್ರಶಾಂತ್ ರೋಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.



