ಹೆಣ್ಣು ಮಕ್ಕಳನ್ನು ಚುಡಾಯಿಸಿದ್ರೆ ಹುಷಾರ್: ಸ್ತ್ರೀ ರಕ್ಷಣೆಗೆ ನಿಂತ ಮಫ್ತಿ ಪೊಲೀಸ್ ಪಡೆ!

0
Spread the love

ವಿಜಯನಗರ:- ಪುಂಡ ಪೋಕರಿಗಳೇ ರಸ್ತೆಯಲ್ಲಿ ಹೋಗೋ ಹೆಣ್ಣು ಮಕ್ಕಳಿಗೆ ಚುಡಾಯಿಸ್ತಿದ್ದೀರಾ!?, ಅವರನ್ನು ಫಾಲೋ ಮಾಡಿ ಟಾರ್ಚರ್ ಕೊಡುತ್ತಿದ್ದೀರಾ!? ಹಾಗಿದ್ರೆ ಹುಷಾರ್ ಸ್ರ್ರೀ ರಕ್ಷಣೆಗೆ ಬಂದಿದೆ ಮಫ್ತಿ ಪೊಲೀಸ್ ಪಡೆ.

Advertisement

ಹೌದು ಇತ್ತೀಚಿನ ದಿನಗಳಲ್ಲಿ ಪುಂಡರು ರಸ್ತೆಯಲ್ಲಿ ಹೋಗೋ ಹೆಣ್ಣು ಮಕ್ಕಳನ್ನು ಚುಡಾಯಿಸೋದು, ಕೆಟ್ಟ ಕೆಟ್ಟದಾಗಿ ಸನ್ನೆಗಳನ್ನು ಮಾಡಿ ಹೆಣ್ಣು ಮಕ್ಕಳಿಗೆ ಮುಜುಗರ ಆಗೋ ರೀತಿ ವರ್ತಿಸುತ್ತಿದ್ದಾರೆ. ಇಂತಹವರ ಕಂಟ್ರೋಲ್ ಗೆ ಇದೀಗ ಸ್ರ್ರೀ ರಕ್ಷಣೆಗೆ ಮಫ್ತಿ ಪೊಲೀಸ್ ಪಡೆ ಸಜ್ಜಾಗಿದೆ.

ವಿಜಯನಗರ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲೂ ಈ ವಿಶೇಷ ಪಡೆ ಕಾರ್ಯ ನಿರ್ವಹಿಸಲಿದೆ. ಶಾಲಾ/ ಕಾಲೇಜುಗಳ ಪ್ರಾರಂಭ ಮತ್ತು ಬಿಡುವ ಮುನ್ನ‌ ಮಫ್ತಿಯಲ್ಲಿ ಗಸ್ತು ತಿರುಗಾಡಲಾಗುತ್ತದೆ. ಬಸ್ ನಿಲ್ದಾಣ, ಸಾರ್ವಜನಿಕ ಸ್ಥಳ, ಹುಡುಗಿಯರು, ಮಹಿಳೆಯರು ಹೆಚ್ಚು ಸೇರುವ ಸ್ಥಳದಲ್ಲಿ ಮಫ್ತಿ ಕಣ್ಗಾವಲು ಇಡಲಿದೆ.

ಇದೆ ವೇಳೆ ಹುಡುಗಿರ ತಂಟೆಗೆ ಹೋದ್ರೆ ಕೇಸ್ ಹಾಕಿ ಪುಂಡರ ಹೆಡೆಮುರಿ ಕಟ್ಟಲು ಹೊಸ ಪಡೆ ಸಿದ್ಧತೆ ಮಾಡಿಕೊಂಡಿದೆ.

ವಿಜಯನಗರ ಜಿಲ್ಲೆಯ 6 ತಾಲೂಕುಗಳ ಎಲ್ಲಾ ಶಾಲಾ/ ಕಾಲೇಜುಗಳ ಎದುರು ಪೊಲೀಸರು ಮಫ್ತಿಯಲ್ಲೇ ಇರ್ತಾರೆ. ಮಾರುವೇಷದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಲಿದ್ದು, ನಾನಾ ಪೊಲೀಸ್ ಠಾಣೆಗಳಲ್ಲಿ ಈಗಾಗಲೇ ಜಿಲ್ಲಾದ್ಯಾಂತ 80 ಕ್ಕೂ ಹೆಚ್ಚು ಪ್ರಕರಣಗಳು ಪೊಲೀಸರು ದಾಖಲು ಮಾಡಿದ್ದಾರೆ.

ಬಸ್ ನಿಲ್ದಾಣ, ಸಾರ್ವಜನಿಕ ಸ್ಥಳ, ಹುಡುಗಿಯರು ಹೆಚ್ಚು ಸೇರೋ ಸ್ಥಳಗಳಲ್ಲಿ ಮಾರುವೇಷದಲ್ಲಿ ಪೊಲೀಸರ ಕಾವಲು ಇರಲಿದೆ. ಬಾಲ ಬಿಚ್ಚುವ ಪುಂಡರಿಗೆ ಮಫ್ತಿ ಪೊಲೀಸರು ಬಿಸಿ ಮುಟ್ಟಿಸಲಿದ್ದಾರೆ.


Spread the love

LEAVE A REPLY

Please enter your comment!
Please enter your name here