HomePolitics Newsಸಿಎಂ ಹಾಗೂ ಮಂತ್ರಿಗಳ ನಡವಳಿಕೆ ಗಮನಿಸಿದ್ರೆ ಅಯ್ಯೋ ಅನ್ನಿಸುತ್ತದೆ: ಬಿ.ವೈ. ವಿಜಯೇಂದ್ರ

ಸಿಎಂ ಹಾಗೂ ಮಂತ್ರಿಗಳ ನಡವಳಿಕೆ ಗಮನಿಸಿದ್ರೆ ಅಯ್ಯೋ ಅನ್ನಿಸುತ್ತದೆ: ಬಿ.ವೈ. ವಿಜಯೇಂದ್ರ

For Dai;y Updates Join Our whatsapp Group

Spread the love

ಬೆಂಗಳೂರು: ಸಿಎಂ ಹಾಗೂ ಮಂತ್ರಿಗಳ ನಡವಳಿಕೆ ಗಮನಿಸಿದ್ರೆ ಅಯ್ಯೋ ಅನ್ನಿಸುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಿಎಂ ನೇತೃತ್ವದಲ್ಲಿ ನಿನ್ನೆ ಪ್ರತಿಭಟನೆ ಮಾಡಿದ್ದಾರೆ. ಸಿಎಂ ಹಾಗೂ ಮಂತ್ರಿಗಳ ನಡವಳಿಕೆ ಗಮನಿಸಿದ್ರೆ ಅಯ್ಯೋ ಅನ್ನಿಸುತ್ತದೆ. ಇಷ್ಟು ದೊಡ್ಡ ಹಗರಣ ಆಗಿದೆ. 187 ಕೋಟಿ‌ ರೂ. ಲೂಟಿ ಹೊಡೆದು ನಮ್ಮ‌ ರಾಜ್ಯದಿಂದ ಹೊರ ರಾಜ್ಯಕ್ಕೆ ಹಣ ವರ್ಗಾವಣೆ ಮಾಡಿ ಹೆಂಡ ಖರೀದಿ ಮಾಡಿರೋದು ಬಹಿರಂಗವಾಗಿದೆ.

ಇ.ಡಿ. ಪ್ರಾಮಾಣಿಕವಾಗಿ ತನಿಖೆ ಮಾಡುತ್ತಿದೆ. ಅದಕ್ಕೂ ಕಲ್ಲು ಹಾಕುವ ಕೆಲಸ ಮಾಡುತ್ತಿದ್ದಾರೆ. ಇದು ಅಕ್ಷಮ್ಯ ಅಪರಾಧ” ಎಂದು ಆರೋಪಿಸಿದರು. ಇನ್ನೂ  ವಾಲ್ಮೀಕಿ ನಿಗಮ ಹಾಗೂ ಮುಡಾ ಹಗರಣದ ಬಗ್ಗೆ ಸಮರ್ಪಕ ತನಿಖೆ ಆಗಲಿ ಅಂತ ಆಡಳಿತ ಪಕ್ಷದಲ್ಲೇ ಒತ್ತಡ ಇದೆ. ಸಿಎಂ ಕುಟುಂಬವೇ ಇದರಲ್ಲಿ ಭಾಗಿಯಾಗಿದೆ. ಅಕ್ರಮವಾಗಿ ಅನುಕೂಲ ಪಡೆದುಕೊಂಡಿದೆ. ಈ‌ ಅಕ್ರಮದ ಬಗ್ಗೆ ಸದನದಲ್ಲಿ ರಾಜ್ಯದ ಜನತೆಯ ಮುಂದೆ ಬಿಚ್ಚಿಟ್ಟಿದ್ದೇವೆ. ಸದನದಲ್ಲಿ‌ ಇಂದಿನಿಂದ ಮುಡಾ ವಿಚಾರವಾಗಿ ಹೋರಾಟ ಮಾಡುತ್ತೇವೆ ಎಂದರು


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!