HomeGadag Newsಪಟ್ಟಣದ ಅಭಿವೃದ್ಧಿ ರಾಜ್ಯಕ್ಕೆ ಮಾದರಿಯಾಗಲಿ : ಜಗದೀಶ

ಪಟ್ಟಣದ ಅಭಿವೃದ್ಧಿ ರಾಜ್ಯಕ್ಕೆ ಮಾದರಿಯಾಗಲಿ : ಜಗದೀಶ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ : ನರೇಗಲ್ ಪಟ್ಟಣವು ಎಲ್ಲ ದೃಷ್ಟಿಯಿಂದಲೂ ಅಭಿವೃದ್ಧಿ ಕಾಣಲಿ. ಈ ಅಭಿವೃದ್ಧಿ ರಾಜ್ಯಕ್ಕೆ ಮಾದರಿಯಾಗುವಂತಿರಬೇಕು. ಇಂದು ಉದ್ಘಾಟನೆಗೊಂಡ ನರೇಗಲ್ ಪಟ್ಟಣ ಅಭಿವೃದ್ಧಿ ಸಮಿತಿ ಆ ದಿಸೆಯಲ್ಲಿ ಶ್ರಮಿಸಲಿ ಎಂದು ಜನನಿ ಸಂಘಟನೆಯ ಜಗದೀಶ ಅಮಾತಿಗೌಡ್ರ ಹೇಳಿದರು.

ಪಟ್ಟಣದಲ್ಲಿ ನರೇಗಲ್ ಪಟ್ಟಣ ಅಭಿವೃದ್ಧಿ ಸಮಿತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮಲ್ಲಿ ಒಗ್ಗಟ್ಟು ಇದ್ದರೆ ಏನನ್ನಾದರೂ ಸಾಧಿಸಬಹುದು. ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ 1000ಕ್ಕೂ ಹೆಚ್ಚಿನ ಯೋಜನೆಗಳಿವೆ. ಇವುಗಳನ್ನು ಅವರಿಗೆ ತಲುಪಿಸುವ ಕೆಲಸವನ್ನು ಮಾಡಬೇಕು. ಎಲ್ಲ ವ್ಯವಸ್ಥೆಗಳಲ್ಲಿಯೂ ಭ್ರಷ್ಟಾಚಾರ ಹೆಚ್ಚಾಗಿದ್ದು, ಅದನ್ನು ತಡೆದು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ದೃಷಿಯಿಂದಲೂ ಈ ಸಮಿತಿ ತನ್ನ ಕಾರ್ಯ ಮಾಡಬೇಕೆಂದು ಅಮಾತಿಗೌಡ್ರ ಹೇಳಿದರು.

ಸಮಿತಿಯ ಅಧ್ಯಕ್ಷ ಶಿವನಗೌಡ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗೀತಾ ಭೋಪಳಾಪುರ ಪ್ರಾರ್ಥಿಸಿದರು. ಜಗದೀಶ ಸಂಕನಗೌಡ್ರ ಸ್ವಾಗತಿಸಿದರು. ಉಮೇಶಗೌಡ ಪಾಟೀಲ ನಿರೂಪಿಸಿದರು. ಶರಣಪ್ಪ ಧರ್ಮಾಯತ ವಂದಿಸಿದರು.

ಸಭೆಯಲ್ಲಿ ಚಂದ್ರಾಮ ಗ್ರಾಮಪುರೋಹಿತ, ಮಲ್ಲನಗೌಡ ಪಾಟೀಲ, ಮಲ್ಲಿಕಾರ್ಜುನ ಮಲ್ಲನಗೌಡ, ಶಿವಪುತ್ರಪ್ಪ ಸಂಗನಾಳ, ಪ್ರಭುಗೌಡ ನಾಡಗೌಡ್ರ, ಕಳಕಪ್ಪ ಕುರಿ, ರವಿಕುಮಾರ ಮ್ಯಾಗೇರಿ, ಕುಬೇರಪ್ಪ ಕುರಿ, ಬಾಳಪ್ಪ ಸೋಮಗೊಂಡ, ಆನಂದ ನರೇಗಲ್ಲ, ವಂಕಲಕುಂಟಿ ಸಿ.ವಿ, ಲಿಂಗರಾಜ ಭೋಪಳಾಪೂರ, ಶಿವನಗೌಡ ಕಡದಳ್ಳಿ, ಶಿವಪ್ಪ ಗುಡಿ, ಶಾಂತಪ್ಪ ಚಿಕ್ಕೊಪ್ಪದ, ಶಿವಕುಮಾರ ಮಾವಿನಕಾಯಿ, ದಾದಾಸಾಬ ನದಾಫ್, ಅರ್ಚನಾ ಕೊಂಡಿ, ಶಸಿಕಲಾ ರಾಠೋಡ, ಕಳಕನಗೌಡ ಪೊಲೀಸ್‌ಪಾಟೀಲ, ಶರಣಪಪ ಗಂಗರಗೊಂಡ, ಶೇಕಪ್ಪ ಕೆಂಗಾರ, ಎಂ.ಎಂ. ಶಿವಶಿಂಪ್ರ, ನವೀನ ಗುರುವಡೆಯರ, ಶಿವಾನಂದ ಇಟಗಿ, ಫಕೀರಯ್ಯ ಹಿರೇಮಠ, ಎನ್.ಎಸ್. ಕನಕೇರಿ, ಎಸ್.ವಿ. ಲಕ್ಕನಗೌಡ್ರ, ಜಿ.ವಿ. ಗೊಡಚಪ್ಪನವರ, ಜಗದೀಶ ಸಂಕನಗೌಡ್ರ, ಅರುಣ ಬಿ.ಕುಲಕರ್ಣಿ, ಈಶ್ವರ ಬೆಟಗೇರಿ, ಚನ್ನಪ್ಪ ಹೊನವಾಡ ಮುಂತಾದವರಿದ್ದರು.

ದಿವ್ಯ ಸಾನ್ನಿಧ್ಯ ವಹಿಸಿದ್ದ ಹಿರೇಮಠದ ಷ.ಬ್ರ. ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ಆಶೀರ್ವಚನ ನೀಡಿ, ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ಅಸ್ತಿತ್ವಕ್ಕೆ ಬಂದಿರುವ ಈ ಸಮಿತಿ ತನ್ನ ಗುರಿಯನ್ನು ಸಾಧಿಸುವತ್ತ ದಿಟ್ಟ ಹೆಜ್ಜೆಯನ್ನಿಡಲಿ. ಸಾಮೂಹಿಕ ಸಂಘಟನೆಯಿಂದ ಏನನ್ನಾದರೂ ಸಾಧಿಸಲು ಸಾಧ್ಯ. ವ್ಯಕ್ತಿ ಸುಧಾರಣೆಯಾದರೆ ಸಮಾಜ ತಾನೇ ತಾನಾಗಿ ಸುಧಾರಣೆಯಾಗುತ್ತದೆ ಎಂದರು.

 


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!