ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಅಬಕಾರಿ ಪೊಲೀಸರು ಕಾರ್ಯಾಚರಣೆ ನಡೆಸಿ ಹತ್ತಿ ಹಾಗೂ ಮೆಣಸಿನಕಾಯಿ ಬೆಳೆಗಳ ಮಧ್ಯ ಬೆಳೆದಿದ್ದ ಸುಮಾರು 16 ಸಾವಿರ ರೂ, ಮೌಲ್ಯದ ಗಾಂಜಾ ಜಪ್ತಿ ಮಾಡಿದ್ದಾರೆ.
Advertisement
ಗದಗ ಜಿಲ್ಲೆಯ ರೋಣ ತಾಲೂಕಿನ ಬಿ ಎಸ್ ಬೇಲೇರಿ ಗ್ರಾಮದ ಶಿವನಗೌಡ ಕೃಷ್ಣೆಗೌಡರ ಎಂಬುವರು ಜಮೀನಿನಲ್ಲಿ ಗಾಂಜಾ ಬೆಳೆದ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಅಬಕಾರಿ ಇನ್ಸ್ಪೆಕ್ಟರ್ ಮಲ್ಲಿಕಾರ್ಜುನ ರೆಡ್ಡಿ ನೇತೃತ್ವದಲ್ಲಿ ಈ ದಾಳಿ ಮಾಡಲಾಗಿದ್ದು, ಆರೋಪಿ ಶಿವನಗೌಡ ಪರಾರಿಯಾಗಿದ್ದಾರೆ.
ಕಾರ್ಯಾಚರಣೆಯಲ್ಲಿ ಪಿಎಸ್ಐಗಳಾದ ಶ್ರೀಶೈಲ ಅಕ್ಕಿ, ಎಚ್ ಪಿ ನಾಯಕ್, ಸಿಬ್ಬಂದಿಗಳಾದ ಬಿ ಎಮ್ ನಿಡಗುಂದಿ, ಬಸವರಾಜ್ ಬಿರಾದಾರ್, ಲೋಹಿತ್ ಮೇಟಿ, ಪರಶುರಾಮ ರಾಥೋಡ್, ಚಂದ್ರು ರಾಥೋಡ್, ಗುರುರಾಜ್, ಚಾಲಕರಾದ ಶೇಖಪ್ಪ, ಮಾಬುಸಾಬ್ ಇದ್ದರು.