ವಿಜಯಸಾಕ್ಷಿ ಸುದ್ದಿ, ಗದಗ : ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ಮಾಡುತ್ತಿರುವ ರಾಜ್ಯ ಸರ್ಕಾರದ ತೀರ್ಮಾನವನ್ನು ವಿರೋಧಿಸಿ ಶ್ರೀರಾಮ ಸೇನಾ ಗದಗ ಜಿಲ್ಲಾ ಘಟಕದ ವತಿಯಿಂದ ಮುಖ್ಯಮಂತ್ರಿಗಳಿಗೆ ಗದಗ ಜಿಲ್ಲಾದಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.
ರಾಜ್ಯ ಸರ್ಕಾರ ರಾಮನಗರ ಜಿಲ್ಲೆಯನ್ನು ಬೆಂಗಳೂರು ವ್ಯಾಪ್ತಿಗೆ ತೆಗೆದುಕೊಂಡು ಅಭವೃದ್ಧಿ ಮಾಡುವ ಬಗ್ಗೆ ಹೇಳಿದೆ. ಆದರೆ ಅಭಿವೃದ್ಧಿಯ ನೆಪದಲ್ಲಿ ಐತಿಹಾಸಿ ರಾಮನಗರ ಹೆಸರನ್ನು ಕೈಬಿಡಲು ಪ್ರಸ್ತಾಪ ಮಾಡಿದ್ದು ಖಂಡನಿಯ. ಸ್ವಾತಂತ್ರ್ಯಾನಂತರ ಕೆಂಗಲ್ ಹನುಮಂತಯ್ಯನವರು ರಾಮನಗರ ಎಂದು ನಾಮಕರಣ ಮಾಡಿ ಅಲ್ಲಿಯ ಭವ್ಯ ಪರಂಪರೆ, ಜನತೆಯ ಭಾವನಾತ್ಮಕ ವಿಷಯಕ್ಕೆ ಗೌರವ ನೀಡಿದ್ದರು.
ಈಗ ಕಾಂಗ್ರೆಸ್ ಸರ್ಕಾರ ಈ ಹೆಸರನ್ನು ಬದಲಾಯಿಸುತ್ತಿರುವುದು ನಾಡಿನ ಭವ್ಯ ಪರಂಪರೆಗೆ ಬಗೆಯುವ ಅನ್ಯಾಯವಾಗಿದೆ. ಈ ಹಿನ್ನೆಲೆಯಲ್ಲಿ ಯಾರದೋ ಹಿತಾಸಕ್ತಿಗಾಗಿ ಜಿಲ್ಲೆಯ ಜನತೆಯ ಆಸೆಗೆ ವಿರುದ್ಧವಾಗಿ ಹೆಸರು ಬದಲಾವಣೆ ಮಾಡುತ್ತಿರುವುದು ಖಂಡನಿಯ ಎಂದರು.
ಈ ಸಂದರ್ಭದಲ್ಲಿ ಶ್ರೀರಾಮ ಸೇನಾ ರಾಜ್ಯ ಶಾರೀರಿಕ ಪ್ರಮುಖರಾದ ಮಹೇಶ ರೋಖಡೆ, ಜಿಲ್ಲಾಧ್ಯಕ್ಷ ಸೋಮು ಗುಡಿ, ಅಶೋಕ ಭಜಂತ್ರಿ, ಸುನೀಲ್ ಮುಳ್ಳಾಳ, ಕಿರಣ ಹಿರೇಮಠ, ಹುಲಿಗೆಪ್ಪ ವಾಲ್ಮೀಕಿ ಸೇರಿದಂತೆ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಇತಿಹಾಸ ತಿಳಿಯದ ಮೂಡತೆ ನಿಮ್ಮ ಇದು ನಿಮಗೆ ಸಂಬಂಧ,ಲ್ಲದ ವಿಷಯ ನಾವು ಮೂಲತ ಬೆಂಗಳೂರು ಜಿಲ್ಲೆಯವರು
We stand with BANGALORE SOUTH DISTRICT