ಮಣ್ಣಿನ ಋಣ ತೀರಿಸಲು ಸಾಧ್ಯವಿಲ್ಲ : ಡಾ. ಪಿ.ಎಲ್. ಪಾಟೀಲ

0
Agricultural conference held on the occasion of 20th Punyasamaranotsava
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ : ಮನುಷ್ಯನಿಗೆ ಮಣ್ಣು ಅತ್ಯಂತ ಮಹತ್ವದ ವಸ್ತು. ಅವನ ಹುಟ್ಟಿನಿಂದ ಕೊನೆಗಾಲದವರೆಗೂ ಅವನು ಮಣ್ಣಿನಿಂದ ಪಾಠ ಕಲಿಯುತ್ತ ಹೋಗುತ್ತಾನೆ. ಆದ್ದರಿಂದ ಮನುಷ್ಯನಿಗೆ ಮಣ್ಣಿನ ಋಣವನ್ನು ತೀರಿಸಿಲು ಎಂದಿಗೂ ಸಾಧ್ಯವಿಲ್ಲ. ಆದರೆ ತನ್ನ ಜೀವಿತಾವಧಿಯುದ್ದಕ್ಕೂ ಆತ ಮಣ್ಣಿನ ಸಂರಕ್ಷಣೆಗೆ ಮುಂದಾಗಬೇಕೆಂದು ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಪಿ.ಎಲ್. ಪಾಟೀಲ ಹೇಳಿದರು.

Advertisement

ಪಟ್ಟಣದ ಹಿರೇಮಠದ ಸಭಾಭವನದಲ್ಲಿ ಮಾತೋಶ್ರೀ ದಿ. ಬಸಮ್ಮನವರು ಸಂಗನಗೌಡ ಪಾಟೀಲ ಅವರ 20ನೇ ಪುಣ್ಯಸ್ಮರಣೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ಕೃಷಿ ಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಣ್ಣು ಒಮ್ಮೆ ನಾಶವಾದರೆ ಮರಳಿ ಪಡೆಯಲಾಗದ ಅಮೂಲ್ಯ ಸಂಪತ್ತು. ಸಸ್ಯ ಸೇರಿದಂತೆ ಸಕಲ ಜೀವಿಗಳಿಗೆ ಮಣ್ಣು ಮಾತೃ ಸ್ವರೂಪಿ. ಮಣ್ಣು ತನ್ನ ಫಲವತ್ತತೆಯನ್ನು ಕಳೆದುಕೊಳ್ಳಲು ಮುಖ್ಯ ಕಾರಣ ರಾಸಾಯನಿಕಗಳ ಬಳಕೆ. ಭೂಮಿಯಲ್ಲಿ ಸಾವಯವ ಪದಾರ್ಥಗಳು ಹೇರಳವಾಗಿದ್ದರೆ ಮಾತ್ರ ಮಣ್ಣಿನ ಫಲವತ್ತತೆ ಉಳಿಯುತ್ತದೆ.

ಒಣ ಬೇಸಾಯದ ಪ್ರದೇಶದಲ್ಲಿ ಮಳೆ ಕಡಿಮೆ ಮತ್ತು ಅನಿಶ್ಚಿತ. ಮಳೆ ನೀರನ್ನು ಬಿದ್ದ ಸ್ಥಳದಲ್ಲಿಯೇ ಸಂರಕ್ಷಣೆ ಮಾಡಿ ಭೂಮಿ ಸವಕಳಿ ಆಗದಂತೆ ನೋಡಿಕೊಳ್ಳುಬೇಕು. ಸಗಣಿ ಗೊಬ್ಬರ, ಎರೆಹುಳು ಗೊಬ್ಬರ, ತ್ಯಾಜ್ಯವಸ್ತು, ಕಾಂಪೋಸ್ಟ್, ಜೈವಿಕ ಗೊಬ್ಬರ, ಸಾವಯವ ಗೊಬ್ಬರಗಳನ್ನು ಹೆಚ್ಚಾಗಿ ಬಳಸಿದಲ್ಲಿ ಮಣ್ಣಿನ ಸಾರವನ್ನು ಉಳಿಸಿಕೊಳ್ಳಲು ಸಾಧ್ಯ ಎಂದರು.

ಕೃಷಿ ಪಂಡಿತ ಗುರುನಾಥ ಓದುಗೌಡ್ರ ಮಾತನಾಡಿ, ನಮ್ಮ ರೈತ ಬಾಂಧವರಲ್ಲಿ ಒಂದು ತಪ್ಪು ಕಲ್ಪನೆ ಬೇರೂರಿಬಿಟ್ಟಿದೆ. ಏನೆಂದರೆ ಗೊಬ್ಬರವನ್ನು ಸಸ್ಯಕ್ಕೆ ಕೊಡುತ್ತಿದ್ದೇವೆ ಎನ್ನುವುದು. ತಿಳಿಯಬೇಕಾದ ವಿಷಯ ಏನೆಂದರೆ ನಾವು ನೀಡಿದ ಯಾವುದೇ ಗೊಬ್ಬರವನ್ನು ಸಸ್ಯ ನೇರವಾಗಿ ಹೀರಿಕೊಳ್ಳುವುದಿಲ್ಲ. ಬದಲಾಗಿ ಮೊದಲು ಅದನ್ನು ಮಣ್ಣು ಹೀರಿಕೊಂಡು ನಂತರ ಮಣ್ಣಿನ ಮುಖಾಂತರ ಅದರ ಸತ್ವವನ್ನು ಸಸ್ಯಗಳು ಹೀರುತ್ತವೆ.

ಮಣ್ಣಿನ ಪರೀಕ್ಷೆ ಮಾಡಿಸಿ ಅದರಲ್ಲಿಯ ಅನಾರೋಗ್ಯ, ಆರೋಗ್ಯ ಏನಿದೆ ಎಂಬುದನ್ನು ತಿಳಿದುಕೊಳ್ಳಬೇಕು. ಅಂದಾಗ ಕೃಷಿಯಿಂದ ಉತ್ಪಾದನೆ ಹಾಗೂ ಲಾಭ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಕೆ.ಸಿ.ಸಿ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಐ.ಎಸ್. ಪಾಟೀಲ ಮಾತನಾಡಿದರು. ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಶಾಸಕ ಜಿ.ಎಸ್. ಪಾಟೀಲ, ಮಾಜಿ ಶಾಸಕ ಡಿ.ಆರ್. ಪಾಟೀಲ, ಮಿಥುನ ಪಾಟೀಲ, ಅಕ್ಷಯ ಪಾಟೀಲ, ವಿ.ಅರ್. ಗುಡಿಸಾಗರ, ಆನಂದ, ಶಿವವನಗೌಡ ಪಾಟೀಲ, ವಿ.ಬಿ. ಸೋಮನಕಟ್ಟಿಮಠ, ಪರಶುರಾಮ ಅಳಗವಾಡಿ, ಮುತ್ತಪ್ಪ ನೂಲ್ಕಿ, ದಾವುದಲಿ ಕುದರಿ, ರಾಚಯ್ಯ ಮಾಲಗಿತ್ತಿಮಠ, ಬಸೀರಾಬಾನು ನದಾಫ್, ನಾಗಭೂಷಣ ಬೆಳವಡಿ, ಎನ್.ವೈ. ಜೋಗಿ, ಎಂ.ಎನ್. ಹುಲಕೋಟಿ, ಎ.ಎ. ನವಲಗುಂದ, ಬಾಳಪ್ಪ ಸೋಮಗೊಂಡ, ಎ.ಆರ್. ಮಲ್ಲನಗೌಡ್ರ, ಕಳಕನಗೌಡ ಪೊಲೀಸ್‌ಪಾಟೀಲ, ನಿಂಗಪ್ಪ ಲಕ್ಕನಗೌಡ್ರ, ಶೇಖಪ್ಪ ಜುಟ್ಲ, ಶೇಖಪ್ಪ ಕೆಂಗಾರ, ಮೈಲಾರಪ್ಪ ಚಳ್ಳಮರದ, ಸೋಮಶೇಖರ ಲಕ್ಕನಗೌಡ್ರ, ವೀರಪ್ಪ ಜಿರ್ಲ, ಅಲ್ಲಾಭಕ್ಷಿ ನದಾಫ್, ನಿಂಗಪ್ಪ ಹೊನ್ನಾಪೂರ, ಮುತ್ತಣ್ಣ ಹಡಪದ, ನಜೀರ್ ಹದ್ಲಿ, ಸಂತೋಷ ಹನಮಸಾಗರ, ಮಂಜುನಾಥ ಧರ್ಮಾಯತ, ಪ್ರಕಾಶ ಪಾದಗಟ್ಟಿ ಮುಂತಾದವರಿದ್ದರು.

ರೋಣ ಮತ್ತು ಗಜೇಂದ್ರಗಡ ತಾಲೂಕುಗಳು ಮುಖ್ಯವಾಗಿ ಕೃಷಿ ಪ್ರಧಾನ ತಾಲೂಕುಗಳಾಗಿವೆ. ಹುಲಕೋಟಿಯಲ್ಲಿರುವಂತೆ ಇಲ್ಲಿಯೂ ಸಹ ಒಂದು ಕೃಷಿ ವಿಜ್ಞಾನ ಕೇಂದ್ರ ಅವಶ್ಯವಾಗಿ ಬೇಕಾಗಿದೆ. ಆದ್ದರಿಂದ ನರೇಗಲ್ಲ ಅಥವಾ ರೋಣದಲ್ಲಿ ಒಂದು ಕೃಷಿ ವಿಜ್ಞಾನ ಕೇಂದ್ರವನ್ನು ಸ್ಥಾಪಿಸಲು ಶಾಸಕರು ಮತ್ತಿತರ ಜನ ಪ್ರತಿನಿಧಿಗಳು ಪ್ರಯತ್ನಿಸಬೇಕು.
– ಡಾ. ಕೆ.ಬಿ. ಧನ್ನೂರ.

ನರೇಗಲ್ ಮತ್ತು ಸುತ್ತಲಿನ ಭಾಗಗಳು ಪಟ್ಟಣ ಪಂಚಾಯತಿ ವ್ಯಾಪ್ತಿಗೆ ಬರುವುದರಿಂದ ಇಲ್ಲಿ ಎರೆಹುಳುಗಳನ್ನು ಸಾಕಲು, ಎರೆ ಹುಳ ಗೊಬ್ಬರ ಪಟ್ಟಿ ತಯಾರಿಕೆಗೆ ಸಹಾಯ ಧನ ಸಿಗುವುದಿಲ್ಲ. ಇದರಿಂದ ಈ ಭಾಗದ ರೈತರಿಗೆ ತೊಂದರೆಯಾಗಿದೆ. ಆದ್ದರಿಂದ ಈ ತೊಂದರೆಯನ್ನು ನಿವಾರಿಸಿ, ಇಲ್ಲಿಯೂ ಸಹ ಎರೆಹುಳು ಪಟ್ಟಿ ಮಾಡಲು, ಗೊಬ್ಬರ ತಯಾರಿಸಲು ಶಾಸಕರು ಅನುಕೂಲ ಮಾಡಿಕೊಡಬೇಕು ಎಂದು ನಿವೃತ್ತ ಶಿಕ್ಷಕ ಎಂ.ಎಸ್. ದಢೇಸೂರಮಠ ಶಾಸಕರಲ್ಲಿ ವಿನಂತಿಸಿದರು.

 


Spread the love

LEAVE A REPLY

Please enter your comment!
Please enter your name here