ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಭಡ್ತಿ ವರ್ಗಾವಣೆಗೆ ದೊಡ್ಡ ಅಡ್ಡಿಯಾಗಿರುವ ವೃಂದ ಮತ್ತು ನೇಮಕ ನಿಯಮ 2017ಕ್ಕೆ ತಿದ್ದುಪಡಿ ಮಾಡಿ ಶಿಕ್ಷಕರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕು ಘಟಕ ಲಕ್ಷ್ಮೇಶ್ವರ ಹಾಗೂ ಶಿರಹಟ್ಟಿ ವತಿಯಿಂದ ಶಿರಹಟ್ಟಿ ತಹಸೀಲ್ದಾರ ಹಾಗೂ ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ಮನವಿ ಅರ್ಪಿಸಲಾಯಿತು.
Advertisement
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಬಿ.ಎಸ್. ಹರ್ಲಾಪುರ, ಎಫ್. ಮಠದ, ಕಾರ್ಯದರ್ಶಿಗಳಾದ ಚಂದ್ರು ನೇಕಾರ, ಜಿ.ಎ. ಬೇವಿನಗಿಡದ, ಬಿ..ಬಿ. ಯತ್ತಿನಹಳ್ಳಿ, ಡಿ.ಡಿ. ಲಮಾಣಿ, ಎಂ.ಎ. ನದಾಫ್, ತಳವಾರ, ಮಂಜುನಾಥ ವಾರದ, ಕಟ್ಟೆಣ್ಣವರ, ಆರ್.ಎಸ್. ಪಾಟೀಲ್, ಭೋವಿ, ಎಂ.ಎಸ್. ಹಿರೇಮಠ, ಶಿವಾನಂದ ಅಸುಂಡಿ, ಸೇರಿದಂತೆ ತಾಲೂಕಿನ ಹಲವು ಶಿಕ್ಷಕರು ಹಾಜರಿದ್ದರು.