ಒಗ್ಗಟ್ಟಿನಿಂದ ಪ್ರಗತಿ ಸಾಧಿಸೋಣ : ಚಂದ್ರಶೇಖರ ಬಿ.ಕಂದಕೂರ

0
Honours in the Office of the Executive Officers of the T.P.M
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಗದಗ ಜಿಲ್ಲೆಯಲ್ಲಿ ರೋಣ ತಾಲೂಖೂ ಪ್ರಗತಿ ಹಂತದಲ್ಲಿ ಹಿಂದೆ ಉಳಿದಿದೆ. ನಿಮ್ಮೆಲ್ಲರ ಸಹಕಾರದಿಂದ ತಾಲೂಕನ್ನು ಪ್ರಗತಿಪಥದಲ್ಲಿ ಮುಂದೆ ಸಾಗಿಸೋಣ ಎಂದು ನೂತನ ನರೇಗಾ ಸಹಾಯಕ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ ಚಂದ್ರಶೇಖರ ಬಿ.ಕಂದಕೂರ ಹೇಳಿದರು.

Advertisement

ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಾನು ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದೆ. ಸದ್ಯ ರೋಣ ತಾಲೂಕಿಗೆ ವರ್ಗಾವಣೆ ಆಗಿದ್ದು, ಇಲ್ಲಿಯ ವಾತಾವರಣ-ನಮ್ಮ ವಾತಾವರಣಕ್ಕೆ ವ್ಯತ್ಯಾಸವಿದೆ. ಎಲ್ಲರೂ ಒಗ್ಗೂಡಿ ಕೆಲಸ ಮಾಡುವದರಿಂದ ತಾಲೂಕಿನ ಪ್ರಗತಿಗೆ ಮುನ್ನಡೆ ಆಗುತ್ತದೆ. ಈ ಹಿನ್ನೆಲೆಯಲ್ಲಿ, ತಾಲೂಕಿನ ಪ್ರಗತಿ ಉತ್ತಮಪಡಿಸಲು ಸಿಬ್ಬಂದಿಗಳ ಸಹಾಯ, ಸಹಕಾರ ಅಗತ್ಯ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಕಾರ್ಯನಿರ್ವಾಹಕ ಅಧಿಕಾರಿ ಮಂಜುಳಾ ಹಕಾರಿ ಮಾತನಾಡಿ, ತಾಲೂಕಿನ ಅಭಿವೃದ್ಧಿ ಹಾಗೂ ಪ್ರಗತಿ ಸಾಧಿಸಲು ಸಂಘಟಿತ ಪ್ರಯತ್ನ ಅತ್ಯಗತ್ಯ. ಎಲ್ಲಾ ಸಿಬ್ಬಂದಿಗಳೂ ನೂತನವಾಗಿ ಆಗಮಿಸಿದ ಸಹಾಯಕ ನಿರ್ದೇಶಕರಿಗೆ ಸಹಕಾರ ನೀಡುವುದರ ಜೊತೆಗೆ ತಾಲೂಕಿನ ಪ್ರಗತಿಗೆ ಮುನ್ನುಡಿ ಬರೆಯಿರಿ ಎಂದರು.

ತಾಲೂಕ ಯೋಜನಾಧಿಕಾರಿ ಸಿ.ಎಸ್. ನೀಲಗುಂದ ನೂತನ ಸಹಾಯಕ ನಿರ್ದೇಶಕರನ್ನು ಸನ್ಮಾನಿಸಿ, ಸ್ವಾಗತಿಸಿದರು. ತಾ.ಪಂ ವ್ಯವಸ್ಥಾಪಕ ದೇವರಾಜ ಸಜ್ಜನಶೆಟ್ಟರ ಪರಿಚಯಿಸಿದರು. ಅರುಣ ಸಿಂಗ್ರಿ ನಿರೂಪಿಸಿ ವಂದಿಸಿದರು.


Spread the love

LEAVE A REPLY

Please enter your comment!
Please enter your name here