Health Care: ಪ್ರತಿನಿತ್ಯ ಬಿಸಿನೀರು ಕುಡಿಯೋ ಅಭ್ಯಾಸ ಇದ್ರೆ ಈ ಸುದ್ದಿ ಮಿಸ್ ಮಾಡ್ದೆ ನೋಡಿ!

0
Spread the love

ಪ್ರತಿನಿತ್ಯ ನೀರು ಕುಡಿಯೋದು ನಮ್ಮ ಆರೋಗ್ಯದ ದೃಷ್ಟಿಯಲ್ಲಿ ತುಂಬಾ ಒಳ್ಳೆಯದು. ಆದರೆ ಕೆಲವರು ಇತ್ತೀಚೆಗೆ ಬಿಸಿ ನೀರು ಹೆಚ್ಚು ಸೇವನೆ ಮಾಡುವ ಅಭ್ಯಾಸ ಹೊಂದಿದ್ದಾರೆ. ಬಿಸಿ ನೀರು ಸೇವನೆ ಒಳ್ಳೆಯದೇ ಆದರೆ ಅತಿಯಾದ್ರೆ ಏನಾಗುತ್ತದೆ ಎಂಬುವುದನ್ನು ಈ ಸ್ಟೋರಿ ಮಿಸ್ ಮಾಡ್ದೆ ನೋಡಿ.

Advertisement

ಹೌದು, ದಿನವಿಡೀ ಬೆಚ್ಚಗಿನ ನೀರು ಕುಡಿದರೆ ಅದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ ಬಿಸಿನೀರು ಕುಡಿಯುವುದರಿಂದ ಆಗುವ ತೊಂದರೆಗಳೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಅತಿಯಾಗಿ ಬಿಸಿ ನೀರು ಕುಡಿಯುವುದರಿಂದ ಕಿಡ್ನಿ ಸಮಸ್ಯೆಯೂ ಉಂಟಾಗುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಮೂತ್ರಪಿಂಡಗಳು ವಿಶೇಷ ಕ್ಯಾಪಿಲ್ಲರಿ ವ್ಯವಸ್ಥೆಯನ್ನು ಹೊಂದಿದ್ದು ಅದು ದೇಹದಿಂದ ವಿಷವನ್ನು ತೆಗೆದುಹಾಕುತ್ತದೆ. ಆದರೆ, ಬಿಸಿನೀರು ಕಿಡ್ನಿ ಮೇಲೆ ಹೆಚ್ಚು ಒತ್ತಡ ಹೇರುತ್ತದೆ ಎನ್ನುತ್ತಾರೆ ತಜ್ಞರು.

ಹೆಚ್ಚು ಬಿಸಿ ನೀರು ಕುಡಿಯುವವರ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮೂತ್ರಪಿಂಡಗಳು ಹೆಚ್ಚು ಕೆಲಸ ಮಾಡುವುದರಿಂದ ಹಾನಿಯಾಗುವ ಅಪಾಯವಿದೆ ಎಂದು ಎಚ್ಚರಿಸಲಾಗಿದೆ. ಮೇಲಾಗಿ.. ಹೆಚ್ಚು ಬಿಸಿ ನೀರು ಕುಡಿಯುವುದರಿಂದ ಗಂಟಲು ನೋವು ಉಂಟಾಗುತ್ತದೆ.

ಬಿಸಿ ನೀರನ್ನು ಅತಿಯಾಗಿ ಕುಡಿಯುವುದರಿಂದ ವಿಪರೀತ ಬೆವರುವಿಕೆ ಉಂಟಾಗುತ್ತದೆ. ಇದು ಬೆವರುವಿಕೆ, ತುರಿಕೆ ಮತ್ತು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ಹೆಚ್ಚು ಬಿಸಿನೀರು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅದೇ ರೀತಿ ಬಿಸಿನೀರು ಕುಡಿಯುವುದರಿಂದ ಕರುಳಿನ ಮೇಲೂ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳಿದ್ದಾರೆ.


Spread the love

LEAVE A REPLY

Please enter your comment!
Please enter your name here