ಪ್ರಶ್ನೆ ಮಾಡಿದವರಿಗೆ “ನಾಯಿ” ಎಂದು ನಿಂದಿಸಿದ ಬಿಜೆಪಿ ಶಾಸಕ: ಹರೀಶ್ ಪೂಂಜಾ ವಿರುದ್ಧ ರೊಚ್ಚಿಗೆದ್ದ ಜನ!

0
Spread the love

ಮಂಗಳೂರು:- ಮಳೆ ಹಾನಿ ಪ್ರದೇಶಕ್ಕೆ ತಡವಾಗಿ ಭೇಟಿ ಕೊಟ್ಟ ಹಿನ್ನೆಲೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾಗೆ ಸ್ಥಳೀಯ ಜನರು ಹಿಗ್ಗಾ ಮುಗ್ಗಾ ಕ್ಲಾಸ್ ತೆಗೆದುಕೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಸವಾಣಾಲಿನಲ್ಲಿ ಜರುಗಿದೆ. ಈ ಮೂಲಕ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾಗೆ ಭಾರೀ ಮುಖಭಂಗವಾಗಿದೆ.

Advertisement

ಇನ್ನೂ ಜನ ಕ್ಲಾಸ್ ತೆಗೆದುಕೊಳ್ಳುತ್ತಿದ್ದಂತೆ ಸಿಡಿಮಿಡಿಗೊಂಡ ಶಾಸಕ ಹರೀಶ್ ಪೂಂಜ ಸ್ಥಳೀಯರ ಜೊತೆ ಕಿರಿಕ್ ತೆಗೆದಿದ್ದಾರೆ. ಓರ್ವ MLAಗೆ ಯಾಕೆ ತಡವಾಗಿ ಎಂದು ಪ್ರಶ್ನೆ ಮಾಡುವ ಹಕ್ಕು ನಿಮಗಿಲ್ಲ. ಆ ತರ ಪ್ರಶ್ನೆ ಮಾಡಿದ್ರೆ ದೇವರ ಮೇಲೆ ಇಡುತ್ತೇನೆ ಎಂದು ಹರೀಶ್ ಪೂಂಜ ಹೇಳಿದ್ದಾರೆ.

ಇನ್ನೂ ಪ್ರಶ್ನೆ ಮಾಡಿದ ಜನರಿಗೆ ದೇವರ ಹೆಸರಲ್ಲಿ ಪೂಂಜ ಬ್ಲಾಕ್ ಮೇಲ್ ಮಾಡಿದ್ದಾರೆ. ಹೀಗಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ರ್ವತನೆಗೆ ಗ್ರಾಮದ ಜನರು ಕೆಂಡಾ ಮಂಡಲರಾಗಿದ್ದಾರೆ.

ತೀವ್ರ ಮಳೆ ಹಾನಿ ಸಂದರ್ಭದಲ್ಲಿ ಕ್ಷೇತ್ರಕ್ಕೆ ಕಾಲಿಡದ ಶಾಸಕರು, ಮಳೆ ಕಡಿಮೆಯಾದ ಬಳಿಕ ಸವಾಣಾಲಿನ ಮಳೆ ಹಾನಿ ಪ್ರದೇಶಕ್ಕೆ ಭೇಟಿ ಕೊಟ್ಟಿದ್ದಾರೆ. ಈ ಹೊತ್ತಲ್ಲಿ ತಡವಾಗಿ ಬಂದ ಶಾಸಕನನ್ನ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.

ಪ್ರಶ್ನೆ ಮಾಡಿದ ಜನರಿಗೆ ಅವಾಚ್ಯವಾಗಿ ಶಾಸಕ ಹರೀಶ್ ಪೂಂಜ ನಿಂದಿಸಿದ್ದು, ಶಾಸಕನ ವರ್ತನೆಗೆ ಬೆಳ್ತಂಗಡಿ ತಾಲೂಕಿನ ಸವಾಣಾಲ್ ಗ್ರಾಮಸ್ಥರು ಇನ್ನಷ್ಟು ಕೆರಳಿದ್ದಾರೆ.

ಪ್ರಶ್ನೆ ಮಾಡಿದವರಿಗೆ ನಾಯಿ ** ಎಂದು ಅವಾಚ್ಯವಾಗಿ ಶಾಸಕರು ನಿಂದಿಸಿದ್ದಾರೆ. ಅನುದಾನ ಬೇಕಾದ್ರೆ ಇಡುತ್ತೇನೆ ಆದರೆ ಅಂತಹ *** ಮಕ್ಕಳನ್ನ ಕರೆದುಕೊಂಡು ಬಂದರೆ ಜಾಗ್ರತೆ ಎಂದು ಶಾಸಕ ಎಚ್ಚರಿಕೆ ಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಜನರ ಆಕ್ರೋಶ ಹೆಚ್ಚಾಗಿದ್ದು, ಗ್ರಾಮಸ್ಥರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ತೀವ್ರ ಜಟಾಪಟಿ ನಡೆದಿದೆ.

ಆಕ್ರೋಶ ತೀವ್ರಗೊಳ್ಳುತ್ತಿದ್ದಂತೆ ಸ್ಥಳದಿಂದ ಶಾಸಕ ಪೂಂಜ ಕಾಲ್ಕಿತ್ತಿದ್ದಾರೆ. ಇದೇ ವೇಳೆ ಶಾಸಕನಿಗೆ ಘೇರಾವ್ ಹಾಕಿ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.


Spread the love

LEAVE A REPLY

Please enter your comment!
Please enter your name here