`ನಾವೆಲ್ಲರೂ ಒಂದು’ ಎಂಬ ಭಾವ ಮೂಡಿದೆ : ಬಸವಲಿಂಗ ಸ್ವಾಮಿಜಿ

0
Kritpur Utsav-2024 3rd Grand Session kicks off in a grand manner
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಶಾಮಿಯಾನ ಸಪ್ಲಾಯರ್ಸ್ ಬೇರೆಯವರ ಕಾರ್ಯಕ್ರಮಗಳನ್ನು ಸುಂದರಗೊಳಿಸುತ್ತಾರೆ. ಈಗ ಅವರ ಕಾರ್ಯಕ್ರಮ ಸುಂದರ ಮಾಡಿಕೊಳ್ಳುತ್ತಿರುವುದು ಅದ್ಭುತ ಕ್ಷಣ. ಪರರ ಸಂತೋಷದಲ್ಲಿ ತಮ್ಮ ಸಂತೋಷವನ್ನು ಶಾಮಿಯಾನ ಸಪ್ಲಾಯರ್ಸ್ ಕಾಣುತ್ತಾರೆ. ನಿಮಗೆ ಹಲವಾರು ಸಮಸ್ಯೆಗಳಿದ್ದರೂ, ಎಲ್ಲವನ್ನು ಮೀರಿ ಕಾರ್ಯಕ್ರಮ ಮಾಡಿದ್ದೀರಿ. ಈ ವೇದಿಕೆ ಸರ್ವಧರ್ಮಗಳಿಂದ ಕೂಡಿದ್ದು, ಭಾರತದಾದ್ಯಂತ ಇರುವ ಎಲ್ಲ ನಾಯಕರು ಸೇರಿದ್ದಾರೆ. ಭಾರತದಲ್ಲಿರುವ `ನಾವೆಲ್ಲರೂ ಒಂದು’ ಎನ್ನುವ ಭಾವನೆ ಇಲ್ಲಿ ಮೂಡಿದೆ ಎಂದು ಜಗದ್ಗುರು ಮುಪ್ಪಿನ ಬಸವಲಿಂಗ ಸ್ವಾಮಿಜಿಗಳು ನುಡಿದರು.

Advertisement

ನಗರದ ಎಪಿಎಂಸಿಯಲ್ಲಿರುವ ಕೆ.ಎಚ್. ಪಾಟೀಲ್ ಸಭಾಭವನದಲ್ಲಿ ಉತ್ತರ ಕರ್ನಾಟಕ ಶಾಮಿಯಾನ ಸಪ್ಲಾಯರ್ಸ್, ಲೈಟಿಂಗ್, ಧ್ವನಿವರ್ಧಕ ಹಾಗೂ ಡೆಕೋರೇಶನ್ ಮಾಲಿಕರ ಕ್ಷೇಮಾಭಿವೃದ್ಧಿ, ಆಲ್ ಇಂಡಿಯಾ ಟೆಂಟ್ ಡೀಲರ್ಸ್ ವೆಲ್‌ಫೇರ್ ಆರ್ಗನೈಜೆಶನ್ ನವದೆಹಲಿ, ಗದಗ ಜಿಲ್ಲಾ ಶಾಮಿಯಾನ ಸಪ್ಲಾಯರ್ಸ್ ಸಂಘದಿಂದ ಆಯೋಜಿಸಿದ್ದ `ಕೃತಪುರ ಉತ್ಸವ-2024, 3ನೇ ಮಹಾ ಅಧಿವೇಶನ’ ಕಾರ್ಯಕ್ರಮವನ್ನು ಉದ್ದೇಶಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಡಬ್ಲ್ಯೂಎಂ ಚರ್ಚ್ನ ಸಭಾ ಪಾಲಕರಾದ ರೆ: ರೆಜಿನಾಲ್ಟಪೌಲ್ ಅವರು ಮಾತನಾಡಿ, ಧಾರ್ಮಿಕ ಆಚರಣೆಗಳು ಪ್ರತಿಯೊಂದು ಧರ್ಮದ ಅಂಗವಾಗಿವೆ. ಎಲ್ಲ ಧರ್ಮದ ಆಚರಣೆಗಳನ್ನು ಯಶಸ್ವಿಗೊಳಿಸುವಲ್ಲಿ ಶಾಮಿಯಾನ ಸಪ್ಲಾಯರ್ಸ್ಗಳ ಪಾತ್ರ ಮಹತ್ವದ್ದಾಗಿದೆ. ಧಾರ್ಮಿಕ ಆಚರಣೆಗಳನ್ನು ಕೇವಲ ಸಂಪ್ರದಾಯವಾಗಿ ಆಚರಿಸಿದರೆ ಸಾಲದು. ನಮ್ಮ ನಡೆ, ನುಡಿ, ಕ್ರಿಯೆಗಳ ಮೂಲಕ ಆಚರಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಮಾತೆ ಉಲ್ಮಾಯೇ ಹಿಂದ್ ಗದಗದ ಅಧ್ಯಕ್ಷ ಹಜರತ್ ಮೌಲಾನಾ ಇನಾಯತುಲ್ಲಾಹ್ ಕುತುಬುದ್ದಿನ್ ಪೀರಜಾದೆ, ಶಾಸಕ ಜಿ.ಎಸ್. ಪಾಟೀಲ್, ಅಮರೇಶ ಹಿರೇಮಠ, ಜಿ. ಪೂರ್ಣಚಂದ್ರರಾವ್, ಎನ್. ರಾಮಾರಾವ್, ಕೆ. ನರಸಿಂಹಮೂರ್ತಿ, ವಿಪುಲ ಸಿಂಘಾಲ, ಕರ್ತಾರಸಿಂಗ ಕೋಚಾರ್, ಶಿವಾನಂದ ಮಾನಕರ, ವಿಜಯಕುಮಾರ, ರವಿ ಮಾಳೆಕೋಪ್ಪಮಠ, ರಾಜಕುಮಾರ ಗೌತಮ್, ಇಂದ್ರಚಂದ, ಸುಖಪಾಲಸಿಂಗ್ ಜಿಲ್, ಪ್ರವೀಣದಾಸ, ಎ.ಪಿ. ಸಿಂಗ್, ಕೆ. ರಘುಪತಿ, ಸಿ. ಕಿಶೋರ ಕುಮಾರ, ವಂಶಿ ಕ್ರಷ್ಣಗೌಡ, ಚನ್ನಬಸಪ್ಪ ಗಸ್ತಿ, ಬಿ.ಎಂ. ಸೋಮಶೇಖರ, ರವೀಂದ್ರ ಬಾಬು ಮೆಣಸಿನಕಾಯಿ, ಮೋಹನ್ ಗಜಾಕೋಶ, ಪ್ರಸಾದ್ ಗಾಯಿ, ಪ್ರಶಾಂತ್ ಅಗರವಾಲ್, ಚಂದ್ರಶೇಖರ ಶೆಖಕಾರ, ರಾಜಕುಮಾರ ಬಿರಾದಾರ, ಶೇಖ್ ಮಹೆಬೂಬ್, ಜಿ. ಹನಮಂತರಾವ್, ಎಂ. ಶಿವಪ್ಪ, ಲಕ್ಷ್ಮಣ್ ದಿಗ್ಗಾಂವಿ, ಸುರೇಶ, ಕಲಬುರ್ಗಿ, ಸೋಮನಾಥ ಗವನಾಳೆ, ಚನ್ನಯ್ಯ ಕಲ್ಮಠ, ಚಂದ್ರಶೇಖರ ಅವನಾಳ, ದರ್ಶನ್ ಜವಾಹರ್, ಜಿ. ಶ್ರೀನಿವಾಸರಾವ್, ಬದ್ರಿನಾರಾಯಣ, ಫಕ್ಕಾರಪ್ಪ ಬಸವಕಲ್ಲ, ಪರಮೇಶ ಗೌರಮ್ಮನವರ, ರಾಜಕುಮಾರ ತೋರಗಲ್, ಮಹ್ಮದ್ ಆಲಂಪಾಷಾ, ಪುಂಡಲೀಕ ಗವಳಿ, ದ್ಯಾಮಣ್ಣ ವಾಡಕರ ಸೇರಿದಂತೆ ಸಹ ಕಾರ್ಯದರ್ಶಿಗಳು, ನಿರ್ದೇಶಕರು, ಜಿಲ್ಲಾ ಪ್ರ. ಕಾರ್ಯದರ್ಶಿಗಳು ಹಾಗೂ ಎಲ್ಲ ತಾಲೂಕಾಧ್ಯಕ್ಷರು, ಕಾರ್ಯದರ್ಶಿಗಳು, ಸದಸ್ಯರು ಉಪಸ್ಥಿತರಿದ್ದರು.

ಅಧಿವೇಶನದ ಆರಂಭದ ದಿನ ಬೆಳಗ್ಗೆ ಪೂಜಾ ಕಾರ್ಯಕ್ರಮ ಹಾಗೂ ಧ್ವಜಾರೋಹಣ ಕಾರ್ಯಕ್ರಮ ಜರುಗಿತು. ಬೆಟಗೇರಿಯ ಮಾರ್ಕಂಡೇಶ್ವರ ದೇವಸ್ಥಾನದಿಂದ ಕೆ.ಎಚ್. ಪಾಟೀಲ್ ಸಭಾಭವನದವರೆಗೆ ಭವ್ಯ ಮೆರವಣಿಗೆ, ಬೃಹತ್ ವಸ್ತು ಪ್ರದರ್ಶನ ಮಳಿಗೆಗಳ ಉದ್ಘಾಟನೆ ಮತ್ತು ರಕ್ತದಾನ ಶಿಬಿರ ನಡೆಯಯಿತು. ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಪ.ಪೂ ಡಾ. ಕಲ್ಲಯ್ಯಜ್ಜನವರಿಗೆ ತುಲಾಭಾರ ಕಾರ್ಯಕ್ರಮವನ್ನು ಭಕ್ತಿಯಿಂದ ನೆರವೇರಿಸಿದರು.

 


Spread the love

LEAVE A REPLY

Please enter your comment!
Please enter your name here