ಉಡುಪಿ: ನಾಪತ್ತೆಯಾಗಿದ್ದ ವಿದ್ಯಾರ್ಥಿಯ ಶವ ಬಾವಿಯಲ್ಲಿ ಪತ್ತೆ..!

0
Spread the love

ಉಡುಪಿ : ನಾಪತ್ತೆಯಾಗಿದ್ದ ವಿದ್ಯಾರ್ಥಿಯ ಶವ ಬಾವಿಯೊಂದರಲ್ಲಿ ಪತ್ತೆಯಾದ ಘಟನೆ ಉಡುಪಿಯ ಹಿರಿಯಡಕ ಪ್ರಥಮ ದರ್ಜೆ ಕಾಲೇಜಿನ ಸಮೀಪ ನಡೆದಿದೆ. ಮೊಬೈಲ್ ಕೊಡದಿದ್ದಕ್ಕೆ ಬಾವಿಗೆ ಹಾರಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಪ್ರಥಮ ಪಿಯುಸಿ ವಿದ್ಯಾರ್ಥಿ ಪ್ರಥಮೇಶ್(16) ಆತ್ಮಹತ್ಯೆಗೆ ಶರಣಾದ ಯುವಕನಾಗಿದ್ದು,

Advertisement

ನಿನ್ನೆ ಮೃತ ವಿದ್ಯಾರ್ಥಿ ಪ್ರಥಮೇಶ್ ಮನೆಯಿಂದ ಕಾಣೆಯಾಗಿದ್ದ. ಇಂದುಬೆಳಿಗ್ಗೆ ಕಾಲೇಜು ಸಮೀಪದ ಮನೆಯ ಬಾವಿಯಲ್ಲಿ ಮೃತ ದೇಹ ಪತ್ತೆಯಾಗಿದೆ. ಈ ಕುರಿತು ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತ ಮಗನನ್ನು ಕಳೆದುಕೊಂಡ ಹೆತ್ತವರ ಗೋಳಾಟ ಮುಗಿಲುಮುಟ್ಟಿದೆ.


Spread the love

LEAVE A REPLY

Please enter your comment!
Please enter your name here