ಕೆ.ಎಚ್. ಪಾಟೀಲ ಫುಟ್‌ಬಾಲ್ ಲೀಗ್ ಸೀಸನ್-2

0
K.H. Patila Football League Season-2
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಸಚಿವ ಎಚ್.ಕೆ. ಪಾಟೀಲ ಆಯೋಜನೆಯ ಫುಟ್‌ಬಾಲ್ ಪಂದ್ಯಾವಳಿಗಳ ನೇತೃತ್ವವನ್ನು ವಹಿಸಿಕೊಂಡಿರುವ ಕೃಷ್ಣಗೌಡ ಪಾಟೀಲ ಹಾಗೂ ಸಚಿನ್ ಪಾಟೀಲರ ಉಪಸ್ಥಿತಿಯಲ್ಲಿ ಗದಗ-ಬೆಟಗೇರಿ ಅವಳಿ ನಗರದ ಫುಟ್‌ಬಾಲ್ ಆಟಗಾರರನ್ನು ಪ್ರೋತ್ಸಾಹಿಸುತ್ತಿದ್ದು, ಕ್ರೀಡಾ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

Advertisement

ಮೊದಲನೇಯ ಪಂದ್ಯ ಕಿಕ್ಕರ್ಸ್-ಹಸಲರ್ಸ್ ನಡುವೆ ನಡೆದು, ಕಿಕ್ಕರ್ಸ್ ತಂಡ 2-1 ಗೋಲುಗಳಿಂದ ಗೆಲವು ಸಾಧಿಸಿತು. ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಕಿಕ್ಕರ್ಸ್ ತಂಡದ ಸುದರ್ಶನ ಲೋಕುರ ಪಡೆದುಕೊಂಡರು.

ಎರಡನೇ ಪಂದ್ಯ ಡಿಫೆಂಡರ್ಸ್-ಟರ್ಮಿನೇಟರ್ಸ್ ನಡುವೆ ನಡೆದು 1-1 ಗೋಲುಗಳಿಂದ ಪಂದ್ಯಾ ಡ್ರಾ ಆಯಿತು. ಟರ್ಮಿನೇಟರ್ಸ್ ತಂಡದ ಇಮಾಮ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡರು.

ಮೂರನೇ ಪಂದ್ಯ ಸ್ಕೈಲೈನ್-ರೇಬಲ್ ನಡುವೆ ನಡೆದು, 2-5 ಗೋಲುಗಳಿಂದ ರೇಬಲ್ ತಂಡ ಗೆಲವು ಸಾಧಿಸಿತು. ರೇಬಲ್ ತಂಡದ ರಾಘು ಹೊಸಮನಿ 3 ಗೋಲುಗಳನ್ನು ಹೊಡೆದು ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡರು.

ನಾಲ್ಕನೇ ಪಂದ್ಯ ಸ್ಲೈಕರ್ಸ್ ಹಾಗೂ ಕಾಂಕರ್ಸ್ ನಡುವೆ ನಡೆದು ಸ್ಲೈಕರ್ಸ್ ತಂಡ 02-01 ಗೋಲುಗಳಿಂದ ಜಯಶಾಲಿಯಾಯಿತು. ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಸ್ಲೈಕರ್ಸ್ ತಂಡದ ಸಮೀರ ಪಡೆದುಕೊಂಡರು.

ಐದನೇ ಪಂದ್ಯ ವಾರಿಯರ್ಸ್-ಮಾಸ್ಟರ್ಸ್ ನಡುವೆ ಏರ್ಪಟ್ಟು, 1-1 ಗೋಲುಗಳಿಂದ ಪಂದ್ಯ ಡ್ರಾ ಆಯಿತು.

ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ವಾರಿಯರ್ಸ್ ತಂಡದ ವಿನಾಯಕ ಪಡೆದುಕೊಂಡರು.


Spread the love

LEAVE A REPLY

Please enter your comment!
Please enter your name here