ಆನೇಕಲ್:- ಗುಂಪು ಕಟ್ಟಿಕೊಂಡು ಯುವಕನಿಗೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ರಾಜಧಾನಿ ಬೆಂಗಳೂರಿನ ಗೆರಟಿಗನಬೆಲೆ ಗ್ರಾಮ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಜರುಗಿದೆ.
ಆನೇಕಲ್ ತಾಲ್ಲೂಕಿನ ಗೆರಟಿಗನಬೆಲೆ ಗ್ರಾಮದಲ್ಲಿ ಹತ್ತಾರು ಮಂದಿ ಸೇರಿ ಓರ್ವ ಯುವಕ ಮೇಲೆ ಹಲ್ಲೆ ನಡೆಸಲಾಗಿದೆ. ಯುವಕನನ್ನ ಮಹಿಳೆ ಬಿಡಿಸಲು ಮುಂದಾದ್ರು ಗುಂಪೊಂದು ಬಿಡದೆ ಹಲ್ಲೆ ನಡೆಸಿದ್ದಾರೆ.
ಹಣಕಾಸಿನ ವಿಚಾರಕ್ಕೆ ನಡೆದಿರುವ ಗಲಾಟೆ ಇದಾಗಿದ್ದು, ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



