ವಿಜಯಸಾಕ್ಷಿ ಸುದ್ದಿ, ಗದಗ : ಗದಗ-ಬೆಟಗೇರಿಗೆ ಹೆಲ್ತ್ ಕ್ಯಾಂಪ್ ನಿವಾಸಿಗಳಾದ ದಿ. ಭೀಮಪ್ಪ ನಿಂಗಪ್ಪ ಹದ್ದಣ್ಣವರ ಶ್ರೀಮತಿ ಕುಂಕುಮ ಭೀಮಪ್ಪ ಹದ್ದಣ್ಣವರ ದಂಪತಿಯ ಮಗಳಾದ ಅನಿತಾ ಹದ್ದಣ್ಣವರ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾಗಿದ್ದಾರೆ.
ಪ್ರೌಢ ಶಿಕ್ಷಣವನ್ನು ಲೋಯಲಾ ಕಾನ್ವೆಂಟ್ ಹೈಸ್ಕೂಲ್‌ನಲ್ಲ್ಲಿ ಮುಗಿಸಿ ನಂತರ ಜೆ.ಟಿ. ಕಾಲೇಜಿನಲ್ಲಿ ಬಿಎಸ್ಸಿ ಪದವಿ ಅಧ್ಯಯನ ನಡೆಸಿದ್ದಾರೆ. ಕೌಶಾಳಿ ಯುನಿವರ್ಸಿಟಿ ಧಾರವಾಡದಲ್ಲಿ ಎಂಬಿಎ ಪದವಿ ಪಡೆದು, ಕೆಎಎಸ್ ಪರೀಕ್ಷೆ ಉತ್ತೀರ್ಣರಾಗಿ ಡಿವೈಎಸ್ಪಿ ಹುದ್ದೆಯನ್ನು ಪಡೆದರು. ಒಬ್ಬ ನಿಷ್ಠಾವಂತ ಮತ್ತು ಪ್ರಾಮಾಣಿಕ ಅಧಿಕಾರಿಯಾಗಿ, ಡಿವೈಎಸ್ಪಿ ಹುದ್ದೆಯಲ್ಲಿ ಅವರಿಗೆ 2012ರಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಪ್ರಶಸ್ತಿ ಕೂಡ ಒಲಿದು ಬಂದಿದೆ.
ವಿಜಯಪುರ ಮತ್ತು ಬಾಗಲಕೋಟೆ ಲೋಕಾಯುಕ್ತ ಹುದ್ದೆಯನ್ನು ಅವರು ನಿಭಾಯಿಸಿ, ಸದ್ಯ ಬೆಂಗಳೂರಿನ ಪಶ್ಚಿಮ ವಿಭಾಗದ ಟ್ರಾಫಿಕ್ ಡಿಸಿಪಿ ಹುದ್ದೆಯಲ್ಲಿದ್ದಾರೆ. ಅವರು ಈಗ ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದು, ಇದೀಗ ಮುಖ್ಯಮಂತ್ರಿಗಳ ಪದಕಕ್ಕೆ ಆಯ್ಕೆಯಾಗಿರುವುದಕ್ಕೆ ಗದಗ-ಬೆಟಗೇರಿಯ ಹೆಲ್ತ್ಕ್ಯಾಂಪ್ ಯುವಕ ಸಂಘ, ಮಹಿಳಾ ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ಅಭಿನಂದಿಸಿದ್ದಾರೆ.