HomeKarnataka Newsಬೈರತಿ ಸುರೇಶ್ ದುರ್ಯೋಧನ ಇದ್ದಂತೆ: ಏಕವಚನದಲ್ಲಿ ಹರಿಹಾಯ್ದ ಹೆಚ್ ವಿಶ್ವನಾಥ್!

ಬೈರತಿ ಸುರೇಶ್ ದುರ್ಯೋಧನ ಇದ್ದಂತೆ: ಏಕವಚನದಲ್ಲಿ ಹರಿಹಾಯ್ದ ಹೆಚ್ ವಿಶ್ವನಾಥ್!

For Dai;y Updates Join Our whatsapp Group

Spread the love

ಬೆಂಗಳೂರು:- ಬೈರತಿ ಸುರೇಶ್ ದುರ್ಯೋಧನ ಇದ್ದಂತೆ ಎಂದು ಹೇಳುವ ಮೂಲಕ ಮಾಜಿ ಸಚಿವ ಹೆಚ್.ವಿಶ್ವನಾಥ್ ಏಕವಚನದಲ್ಲಿ ಹರಿಹಾಯ್ದಿದ್ದಾರೆ.

ಈ ಸಂಬಂಧ ಮಾತನಾಡಿದ ಅವರು,ಮುಡಾ ಹಗರಣದಲ್ಲಿ ಸುರೇಶ್ ಪಾತ್ರವಿದೆ. ಅವನನ್ನ ಹತ್ತಿರ ಬಿಟ್ಟುಕೊಂಡಿದ್ದೇ ತಪ್ಪು. ಮೊದಲು ಅವನನ್ನ ಒದ್ದು ಹೊರಗೆ ಹಾಕಬೇಕು. ಮುಡಾ ಕಮಿಷನರ್ ಆಗಿದ್ದ ನಟೇಶನನ್ನ ಹೊರಗೆ ಹಾಕ್ಬೇಕು. ಸರ್ಕಾರದ ಆಸ್ತಿ ಅಷ್ಟು ಲೂಟಿ ಮಾಡ್ತಿದ್ದಾರೆ. ಅಷ್ಟು ಲೂಟಿ ಮಾಡಿದ ಆಯುಕ್ತರ ಮೇಲೂ ಕ್ರಮವಿಲ್ಲ ಎಂದು ಅವರು ಕಿಡಿಕಾರಿದ್ದಾರೆ.

ನಾನು ಮುಡಾ ಪ್ರಕರಣದಲ್ಲಿ ಸೈಲೆಂಟ್ ಆಗಿಲ್ಲ. ದಿನವೂ ಮಾತನಾಡೋಕೆ ಆಗುತ್ತಾ? ನಾನು ಮೊದಲೇ ಸಿದ್ದರಾಮಯ್ಯನವರಿಗೆ ಸರೆಂಡರ್ ಮಾಡಿ ಅಂದಿದ್ದೆ. ಅದ್ಯಾಕೋ ಅವರು ಸುಮ್ಮನಾದರು. ಸ್ವತಃ ಮೈಸೂರಿನವರಾದ ಸಿದ್ದರಾಮಯ್ಯ ಅವರಿಗೂ ಮೂಡಾ ರಿಪೇರಿ ಮಾಡೋಕೆ ಆಗಲಿಲ್ಲ ಅಂದ್ರೆ ಹೇಗೆ? ಬಡವರಿಗೆ ಸೈಟ್ ಕೊಡಿ ಅಂದ್ರೆ ಕೊಡಲಿಲ್ಲ. ಇದನ್ನ ಸಿದ್ದರಾಮಯ್ಯ ಸೀರಿಯಸ್ ಆಗಿ ತೆಗೆದುಕೊಳ್ಳಲಿಲ್ಲ ಎಂದು ಸಿಎಂ ವಿರುದ್ಧವೂ ಅಸಮಾಧಾನ ಹೊರಹಾಕಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!