ರಂಗೋಲಿ ಸ್ಪರ್ಧೆಯ ಫಲಿತಾಂಶ

0
Rangoli Competition Result
Spread the love

ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಮನೋರಮಾ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಪಿಯುಸಿ ಸಂಯೋಜಕರಾದ ಪ್ರೊ.ಶಾಹೀದಾ ಶಿರಹಟ್ಟಿ, ಪ್ರೊ. ಆರತಿ, ಪ್ರೊ. ಕುಸುಮಾ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು.

Advertisement

ಪ್ರಥಮ ಸ್ಥಾನವನ್ನು ಭೂಮಿಕಾ ಹಾಗೂ ಲತಾ, ದ್ವಿತೀಯ ಸ್ಥಾನವನ್ನು ಅಮೂಲ್ಯಾ ಬಿ. ಹಾಗೂ ಅಮೂಲ್ಯಾ ಕೆ., ತೃತೀಯ ಸ್ಥಾನವನ್ನು ಸೋಫಿಯಾ ಹಾಗೂ ಫಾತೀಮಾ, ನಾಲ್ಕನೇ ಸ್ಥಾನವನ್ನು ಅಮೂಲ್ಯಾ ಪಡೆದುಕೊಂಡರು.

ವಿಜೇತ ವಿದ್ಯಾರ್ಥಿನಿಯರಿಗೆ ಸಂಸ್ಥೆಯ ಚೇರಮನ್ ಎನ್.ಎಮ್. ಕುಡತರಕರ, ಪ್ರಾಚಾರ್ಯ ಬಿ.ಎಸ್. ಹಿರೇಮಠ, ಸಂಸ್ಥೆಯ ಕಾರ್ಯದರ್ಶಿ ಮಂಜುನಾಥ ಕುಡತರಕರ, ಆಡಳಿತಾಧಿಕಾರಿ ಕಿಶೋರ ಮುದಗಲ್ಲ, ಸಂಸ್ಥೆಯ ನಿರ್ದೇಶಕರಾದ ಸಂಜಯ ಕುಡತರಕರ, ಚೇತನ ಕುಡತರಕರ, ಪಿಯುಸಿ ಸಂಯೋಜಕಿ ಪ್ರೊ. ಶಾಹೀದಾ ಶಿರಹಟ್ಟಿ ಹಾಗೂ ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ.


Spread the love

LEAVE A REPLY

Please enter your comment!
Please enter your name here