ಸಾಕ್ಷಿದಾರನಾಗಿ ಆರೋಪಿತರನ್ನು ಭೇಟಿ ಮಾಡಬಾರದೆಂದು ಗೊತ್ತಿರಲಿಲ್ಲ: ನಟ ಚಿಕ್ಕಣ್ಣ

0
Spread the love

ಬೆಂಗಳೂರು: ದರ್ಶನ್‌ರನ್ನು ಮಾತನಾಡಿಸಬಾರದು ಅನ್ನೋದು ನನಗೆ ಗೋತ್ತಿರಲಿಲ್ಲ. ಹಾಗಾಗಿ ನಾನು ಪರಪ್ಪನ ಅಗ್ರಹಾರಕ್ಕೆ ಹೋಗಿ ದರ್ಶನ್ ಭೇಟಿ ಮಾಡಿ ಬಂದಿದ್ದೆ ಎಂದು ನಟ ಚಿಕ್ಕಣ್ಣ ಹೇಳಿದರು. ವಿಚಾರಣೆಯ ಬಳಿಕ ಚಿಕ್ಕಣ್ಣ ಮಾತನಾಡಿ, ನಾನು ಒಬ್ಬ ಸಾಕ್ಷಿದಾರನಾಗಿದ್ದುಕೊಂಡು ಹೋಗಿ ದರ್ಶನ್‌ರನ್ನು ಮಾತನಾಡಿಸಬಾರದು ಅನ್ನೋದು ನನಗೆ ಗೋತ್ತಿರಲಿಲ್ಲ. ಹಾಗಾಗಿ ನಾನು ಪರಪ್ಪನ ಅಗ್ರಹಾರಕ್ಕೆ ಹೋಗಿ ದರ್ಶನ್ ಭೇಟಿ ಮಾಡಿ ಬಂದಿದ್ದೆ.

Advertisement

ಹಾಗಾಗಿ ವಿಚಾರಣೆಗೆ ಬರುವಂತೆ ನಿನ್ನೆ ನೋಟಿಸ್ ಕೊಟ್ಟಿದ್ದರು. 9 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ಕೊಡಲಾಗಿತ್ತು. ಹಾಗಾಗಿ ಇಂದು ವಿಚಾರಣೆಗೆ ಹಾಜರಾಗಿದ್ದೇನೆ. ವಿಚಾರಣೆಯ ವೇಳೆ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದರ ಬಗ್ಗೆ ಒಂದಷ್ಟು ಪ್ರಶ್ನೆ ಕೇಳಿದ್ದರು. ಅದಕ್ಕೆ ಉತ್ತರ ಕೊಟ್ಟಿದ್ದೀನಿ. ಮತ್ತೆ ಅವರು ವಿಚಾರಣೆಗೆ ಕರೆದರೆ ಬರುತ್ತೇನೆ. ಸದ್ಯ ವಿಚಾರಣೆಗೆ ಬರುವುದಕ್ಕೆ ಹೇಳಿಲ್ಲ. ಸಾಕ್ಷಿದಾರ ಹೋಗಬಾರದು ಅನ್ನೋದು ನನಗೆ ತಿಳಿದಿರಲಿಲ್ಲ. ಗೊತ್ತಿದ್ದರೆ ಹೋಗಿ ದರ್ಶನ್‌ರನ್ನು ಜೈಲಿನಲ್ಲಿ ಭೇಟಿ ಆಗುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here