ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಛಬ್ಬಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮ ರಣತೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆಯಿತು.
Advertisement
ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ಮಹದೇವಪ್ಪ ಡಂಬಳ ವಹಿಸಿದ್ದರು. ಉದ್ಘಾಟನೆಯನ್ನು ಬಿಇಓ ಎನ್.ನಾಯಕ ನೆರವೇರಿಸಿದರು. ಕ್ಲಸ್ಟರ್ ಸಿಆರ್‌ಪಿ ಗೀತಾ ಸರವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಶರಣಬಸವ ಪಾಟೀಲ, ಈಶ್ವರ ಮೆಡ್ಲೇರಿ, ಗ್ರಾ.ಪಂ ಅಧ್ಯಕ್ಷೆ ವಿಜಯಲಕ್ಷ್ಮಿ ಚವ್ಹಾಣ, ಉಪಾಧ್ಯಕ್ಷ ಸಂತೋಷ ಓಬಾಜಿ, ಸದಸ್ಯರಾದ ಅಶೋಕ ಬಳ್ಳಾರಿ, ಶರೀಫಸಾಬ ಛಬ್ಬಿ, ಸುರೇಶ ಸಣ್ಣತಂಗಿ, ಐ.ಆರ್. ಪರಬತ ಮುಂತಾದವರು ಉಪಸ್ಥಿತರಿದ್ದರು.