ಅಮೃತ ಭೋಜನ ಕಾರ್ಯ ಶ್ಲಾಘನೀಯ : ನಿರ್ಮಲಾ ಸೂಡಿ

0
Amrita Bhoja work is commendable
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ : ಶ್ರಾವಣ ಮಾಸದ ಒಂದು ತಿಂಗಳು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ಅಮೃತ ಭೋಜನ ಮಾಡುತ್ತಿರುವ ಈ ಶಾಲೆಯ ಶಿಕ್ಷಕರ ಕಾರ್ಯ ಶ್ಲಾಘನೀಯ ಎಂದು ಗದಗನ ಹರಿಣಿ ವಿವಿಧೋದ್ದೇಶ ಮಹಿಳಾ ಸಂಘದ ಅಧ್ಯಕ್ಷೆ ನಿರ್ಮಲಾ ಸೂಡಿ ಹೇಳಿದರು.

Advertisement

ಪಟ್ಟಣದ ಕೆಜಿಎಂಎಸ್ ಸರ್ಕಾರಿ ಶಾಲೆಯಲ್ಲಿ ಶ್ರಾವಣ ಮಾಸದ ನಿಮಿತ್ತ ಅಮೃತ ಭೋಜನದಲ್ಲಿ ವಿದ್ಯಾರ್ಥಿಗಳಿಗೆ ಸಿಹಿ ಊಟವನ್ನು ನೀಡಿ ಅವರು ಮಾತನಾಡಿದರು.

ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಕ್ಕಳಿಗೆ ಪೋಷಕಾಂಶಗಳ ಕೊರತೆ ಆಗದಂತೆ ನೋಡಿಕೊಳ್ಳುವದು ಮತ್ತು ಬಡ ಮಕ್ಕಳಿಗೆ ಬಿಸಿ ಊಟದ ಜೊತೆಗೆ ಶ್ರಾವಣ ಮಾಸದಲ್ಲಿ ಪ್ರತಿ ದಿನ ಒಬ್ಬ ದಾನಿಗಳ ಮೂಲಕ ಸಿಹಿ ಊಟ ನೀಡುವ ಈ ಶ್ರಾವಣ ಮಾಸದ ಅಮೃತ ಭೋಜನ ಕಾರ್ಯಕ್ರಮ ಅತ್ಯುತ್ತಮವಾಗಿದೆ. ಸರ್ಕಾರಿ ಶಾಲೆಯಲ್ಲಿ ಸುಮಾರು ಶೇ.80ರಷ್ಟು ಬಡ ಮಕ್ಕಳು ಇದ್ದಾರೆ. ಅಂತಹ ಮಕ್ಕಳ ದೇಹ ಸದೃಢಗೊಳ್ಳಲು ಇದು ಸಹಾಯವಾಗಿದೆ. ಈ ಕಾರ್ಯ ನಿರಂತರವಾಗಿ ಪತ್ರಿ ವರ್ಷ ಯಶಸ್ವಿ ಆಗಲಿ ಎಂದರು.

ಅಮೃತ ಭೋಜನ ವ್ಯವಸ್ಥೆ ಮಾಡಿಸಿದ ಗದಗನ ಹರಿಣಿ ವಿವಿಧೋದ್ದೇಶ ಮಹಿಳಾ ಸಂಘದವರಿಗೆ ಶಾಲೆಯ ವತಿಯಿಂದ ಸನ್ಮಾನ ಜರುಗಿತು. ಸಂಘದ ಸದಸ್ಯರಾದ ಅಶ್ವಿನಿ ಸಂಶಿಮಠ, ಲಲಿತಾ ಹಿರೇಮನಿ, ಸುನೀಲ ವಸ್ತçದ, ಮುಖ್ಯ ಶಿಕ್ಷಕ ಬಸವರಾಜ ಕುರಿ, ಎನ್.ಎಲ್. ಚವ್ಹಾಣ, ಎಂ.ಪಿ. ಅಣಗೌಡರ, ಡಿ.ವಿ. ಕಳ್ಳಿ, ಜೆ.ಎ. ಪಾಟೀಲ, ಎಂ.ಎಸ್. ಮಾಳಶೆಟ್ಟಿ, ಎಸ್.ಐ. ಜಗಾಪೂರ, ರಾಜೇಶ್ವರಿ ತೊಂಡಿಹಾಳ, ಎಚ್.ಎಫ್. ಕಡ್ಲಿಮಟ್ಟಿ, ಬಿ.ಡಿ. ಹಳ್ಳದಮನಿ ಸೇರಿದಂತೆ ಇತರರಿದ್ದರು.


Spread the love

LEAVE A REPLY

Please enter your comment!
Please enter your name here