ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪವಿತ್ರ ಶ್ರಾವಣ ಮಾಸದ ಕೊನೆಯ ಶನಿವಾರ ಪಟ್ಟಣದ ಸವಣೂರು ರಸ್ತೆಯಲ್ಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಭಾವಸಾರ ಕ್ಷತ್ರಿಯ ಸಮಾಜದ ವಾರಕರಿ ಹಾಗೂ ಬಾಂಧವರಿಂದ ಭಗವದ್ಗೀತಾ, ಶ್ರೀ ಜ್ಞಾನೇಶ್ವರೀ ಗ್ರಂಥ ಪಾರಾಯಣ, ನಾಮಜಪ, ಭಜನೆಗಳನ್ನು ನೆರವೇರಿಸಿದರು.
Advertisement
ಹ.ಭ.ಪ ಸತೀಶ ಮಾಂಡ್ರೆಯವರ ನೇತೃತ್ವದಲ್ಲಿ ಪಾರಾಯಣ ನಾಮಜಪಯಜ್ಞ ಭಜನೆ ಸೇವೆ ಅಚಚ್ಚುಕಟ್ಟಾಗಿ ನಡೆಸಿಕೊಟ್ಟರು. ನಿವೃತ್ತಿ ತಾಂದಳೆ, ಸಂತೋಷ ಸರ್ವದೆ, ಜ್ಞಾನೋಬಾ ಬೋಮಲೆ, ಸಂಜೀವ, ಉದಯ, ಮಹಿಳಾ ಮಂಡಳಿಯ ರುಕುಮಾಬಾಯಿ ರಂಪೂರೆ ಸೇರಿದಂತೆ ಸಮಾಜದ ಮಹಿಳೆಯರು ಪಾಲ್ಗೊಂಡಿದ್ದರು. ರಮೇಶ ಬಾವಿಕಟ್ಟಿಯವರ ಇದ್ದರು.


