Crime News: ಮೈತುಂಬಾ ಸಾಲ ಮಾಡಿಕೊಂಡಿದ್ದ ಪತಿಯನ್ನೇ ಕೊಂದ ಹೆಂಡತಿ ಹಾಗೂ ಅತ್ತೆ!

0
Spread the love

ಬೆಳಗಾವಿ:- ಮೈತುಂಬ ಸಾಲ ಮಾಡಿಕೊಂಡಿದ್ದ ಗಂಡನನ್ನು ಕೊಲೆ ಮಾಡಿ ಸಹಜ ಸಾವೆಂದು ಬಿಂಬಿಸಿದ್ದ ಪತ್ನಿ ಮತ್ತು ಅತ್ತೆಯನ್ನು ಅರೆಸ್ಟ್ ಮಾಡಲಾಗಿದೆ.

Advertisement

ವಿನಾಯಕ ಜಾಧವ್ ಕೊಲೆಯಾದ ವ್ಯಕ್ತಿ. ಜಾಧವ್ ಹೆಂಡತಿ ಮತ್ತು ಆಕೆಯ ತಾಯಿ ಇಬ್ಬರೂ ಸೇರಿಕೊಂಡು ಜಾಧವ್ ಕೊಲೆ ಮಾಡಿ ಬಳಿಕ ಇದೊಂದು ಸಹಜ ಸಾವು, ತನ್ನ ಪತಿ ಕುಡಿದು ಬಂದು ಬಿದ್ದು ಮೃತಪಟ್ಟಿದ್ದಾನೆ ಎಂದು ಬಿಂಬಿಸಿದ್ದರು.

ಆದರೆ ಈಗ ತಿಂಗಳ ಬಳಿಕ ಸಾವಿನ ಅಸಲಿ ಸತ್ಯ ಹೊರ ಬಿದ್ದಿದೆ. ಪತ್ನಿ ರೇಣುಕಾ, ಅತ್ತೆ ಶೋಭಾ ಪೊಲೀಸರ ಅತಿಥಿಯಾಗಿದ್ದಾರೆ.

ವಿನಾಯಕ ಜಾಧವ್ ಅವರು ಕೊರೊನಾ ಸಮಯದಲ್ಲಿ ತಮ್ಮ ಉದ್ಯಮದಲ್ಲಿ ನಷ್ಟ ಹೊಂದಿ ಸಾಲದ ಸುಳಿಗೆ ಸಿಲುಕಿದ್ದರು. ಹೀಗಾಗಿ ಸಾಲಗಾರರ ಕಾಟಕ್ಕೆ ಬೇಸತ್ತು ಬೆಳಗಾವಿ ಬಿಟ್ಟು ಹೋಗಿದ್ದರು. ಆದರೆ ಮನೆಯನ್ನು ಸಾಲಕ್ಕೆ ಅಡಮಾನವಾಗಿ ಇಟ್ಟಿದ್ದರಿಂದ ಆಗಾಗ ಸಾಲಗಾರರು ಮನೆ ಬಳಿ ಬರುತ್ತಿದ್ದರು. ಆದರೆ ವಿನಾಯಕ ಜಾಧವ್ ಹೆಂಡತಿ ಹಾಗೂ ಅತ್ತೆ ತಮಗೂ ಸಾಲಕ್ಕೂ ಸಂಬಂಧ ಇಲ್ಲ ಎಂದು ಸಾಲಗಾರರನ್ನು ಓಡಿಸಿದ್ದರು.

ಬರೋಬ್ಬರಿ ಮೂರು ವರ್ಷದ ಬಳಿಕ ಜುಲೈ 29ರಂದು ವಿನಾಯಕ ಜಾಧವ್ ಏಕಾಏಕಿ ಬೆಳಗಾವಿಯ ಮನೆಗೆ ಎಂಟ್ರಿಕೊಟ್ಟಿದ್ದರು. ತಡ ರಾತ್ರಿ ಮದ್ಯಪಾನ ಮಾಡಿ ಮನೆಗೆ ಬಂದಿದ್ದ ವಿನಾಯಕ ತನ್ನ ಹೆಂಡತಿ ರೇಣುಕಾ ಜೊತೆ ಜಗಳವಾಡಿದ್ದರು.

ಕೊನೆಗೆ ಗಂಡನ ಜಗಳದಿಂದ ಬೇಸತ್ತು ಕೊಲೆ ಮಾಡಲು ಹೆಂಡತಿ ಅತ್ತೆ ಪ್ಲಾನ್ ಮಾಡಿದ್ದಾರೆ. ಕೊಲೆಯಿಂದ ಸಾಲಗಾರರು ಸುಮ್ಮನಾಗ್ತಾರೆ, ತಮಗೂ ಗಂಡನ ಕಿರಿಕಿರಿ ತಪ್ಪುತ್ತೆ ಎಂದು ಚಿಂತಿಸಿ ಮಲಗಿದ್ದ ಪತಿಯನ್ನು ಹಗ್ಗದಿಂದ ಕುತ್ತಿಗೆ ಕಟ್ಟಿ, ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.

ಹೆಂಡತಿ ರೇಣಕಾಗೆ ಆಕೆಯ ತಾಯಿ ಶೋಭಾ ಅವರು ಸಾಥ್ ಕೊಟ್ಟಿದ್ದಾರೆ. ಕೊಲೆ ಮಾಡಿದ ಬಳಿಕ ಇಬ್ಬರೂ ಸೇರಿಕೊಂಡು ಶವವನ್ನು ಮನೆಯ ಮುಂಭಾಗದಲ್ಲಿ ಬಿಸಾಡಿ ಕುಡಿದು ವಿನಾಯಕ್ ಸತ್ತಿದ್ದಾನೆ ಎಂದು ಬಿಂಬಿಸಲು ಯತ್ನಿಸಿದ್ದಾರೆ.

ಬೆಳಗ್ಗೆ ಅಕ್ಕಪಕ್ಕದ ಮನೆಯವರನ್ನು ಕರೆದು ಪತಿ ಮದ್ಯಪಾನ ಮಾಡಿ ಬಿದ್ದಿದ್ದಾನೆ ಎಂದು ಡ್ರಾಮಾ ಮಾಡಿದ್ದಾರೆ. ಇದು ಕೊಲೆಯಲ್ಲ ಸಹಜ ಸಾವು ಎಂದು ಬಿಂಬಿಸಿದ್ದಾರೆ. ಆದರೆ ಒಂದು ತಿಂಗಳ ಬಳಿಕ ಮರಣೋತ್ತರ ಪರೀಕ್ಷೆಯಿಂದ ವಿನಾಯಕ ಸಾವಿನ ಸತ್ಯ ಹೊರ ಬಂದಿದೆ.


Spread the love

LEAVE A REPLY

Please enter your comment!
Please enter your name here