ಆಂಧ್ರಪ್ರದೇಶ, ತೆಲಂಗಾಣ ಜನರ ನೆರವಿಗೆ ನಿಂತ ಐಕಾನ್ ಸ್ಟಾರ್ ಅಲ್ಲು ಅರ್ಜುನ್!

0
Spread the love

ಆಂದ್ರಪ್ರದೇಶ: ರಣಭೀಕರ ಮಳೆಗೆ ತೆಲುಗು ರಾಜ್ಯಗಳು ತತ್ತರಿಸಿವೆ. ಆಂಧ್ರಪ್ರದೇಶ ಹಾಗೂ ತೆಲಂಗಾಣದ ಒಂದೊಂದು ದೃಶ್ಯಗಳು ಕರುಳನ್ನ ಹಿಂಡುತ್ತಿವೆ. ರಸ್ತೆಗಳೆಲ್ಲ ಹಳ್ಳಗಳಂತಾಗಿ ಜನರ ಆಪೋಷನ ತೆಗೆದುಕೊಳ್ಳುತ್ತಿವೆ. ಇನ್ನೂ ಭಾರಿ ಮಳೆಯಿಂದ ನಲುಗಿದ ತೆಲುಗು ರಾಜ್ಯಗಳ ವಿವಿಧ ಪ್ರದೇದ ಜನರ ನೆರವಿಗೆ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಬಂದಿದ್ದು, ಎರಡೂ ರಾಜ್ಯಗಳ ನೆರೆ ಪೀಡಿತರಿಗಾಗಿ 1 ಕೋಟಿ ರೂಪಾಯಿಗಳನ್ನು ದೇಣಿಗೆಯಾಗಿ ನೀಡಿದ್ದಾರೆ.

Advertisement

ಜನ ಸಂಕಷ್ಟದಲ್ಲಿದ್ದಾಗ ಈ ಹಿಂದೆಯೂ ಅಲ್ಲು ಅರ್ಜುನ್ ಜನರ ಸಹಾಯಕ್ಕೆ ನಿಂತಿದ್ದರು. ಈಗ ಅದು ಮತ್ತೆ ಮುಂದುವರೆದಿದೆ. ತಾನು ಜನರನ್ನು ರಂಜಿಸುವುದು ಮಾತ್ರವಲ್ಲ ಜನರ ಸಂಕಷ್ಟಕ್ಕೂ ಮಿಡಿಯುತ್ತಾರೆ ಎಂಬುದನ್ನು ಮತ್ತೊಮ್ಮೆ ಈ ಮೂಲಕ ಮತ್ತೊಮ್ಮೆ ತೋರಿಸಿಕೊಟ್ಟಿದ್ದಾರೆ.

ʼಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿನ ಕೆಲ ಪ್ರದೇಶದ ಜನ ಜನ ಮಳೆಯಿಂದಾಗಿ ಮನೆ, ಮಠ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವುದು ನನ್ನ ಮನಸ್ಸಿಗೆ ತೀರ್ವ ನೋವುಂಟು ಮಾಡಿದೆ. ಅವರ ಕಷ್ಟಕ್ಕೆ ನನ್ನ ಕಡೆಯಿಂದ ತಲಾ  1 ಕೋಟಿ ರೂಪಾಯಿಗಳನ್ನು ಮುಖ್ಯ ಮಂತ್ರಿ ಪರಿಹಾರ ನಿಧಿಗೆ ನೀಡುತ್ತಿದ್ದೆ. ಆದಷ್ಟು ಬೇಗ ಎಲ್ಲರೂ ಸಂಕಷ್ಟದಿಂದ ಪಾರಾಗುವಂತಾಗಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆʼಎಂದು ಅಲ್ಲು ಅರ್ಜುನ್ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here