ವಿಜಯಸಾಕ್ಷಿ ಸುದ್ದಿ, ಮುಳಗುಂದ : ಮುಳಗುಂದ ಅಂಜುಮನ್ ಸರಕಾರಿ ಉರ್ದು ಪ್ರೌಢ ಶಾಲೆಯಲ್ಲಿ 5-6 ವರ್ಷಗಳಿಂದ ಖಾಲಿಯಿದ್ದ ಮುಖ್ಯೋಪಾಧ್ಯಾಯರ ಹುದ್ದೆಯನ್ನು ಭರ್ತಿ ಮಾಡುವಂತೆ, ಅಂಜುಮನ್ ಸಂಸ್ಥೆಯ ಸತತ ಪ್ರಯತ್ನದಿಂದ ಹಾಗೂ ಸಚಿವರಾದ ಎಚ್.ಕೆ, ಪಾಟೀಲ್ ಅವರ ಹಾರೈಕೆ ಮೇರೆಗೆ ಈ ಬಾರಿಯ ಮುಖ್ಯೊಪಾದ್ಯಾಯರ ವರ್ಗಾವಣೆಯಲ್ಲಿ ಮೊದಲ ಪ್ರಾತಿನಿಧ್ಯದಲ್ಲಿ ಅಂಜುಮನ ಸರಕಾರಿ ಉರ್ದು ಪ್ರೌಢಶಾಲೆಗೆ ನೂತನವಾಗಿ ರಂಜನಾ ತಳಗೇರಿ (KES) ಅವರು ಅಧಿಕಾರ ವಹಿಸಿಕೊಂಡಿದ್ದಾರೆ.
ನೂತನ ಮುಖ್ಯೋಪಾಧ್ಯಾಯರನ್ನು ಖಿದ್ಮತ್-ಎ-ಮಿಲ್ಲತ್ ಗ್ರೂಪ್ ವತಿಯಿಂದ ಸನ್ಮಾನಿಸಿ ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ಗ್ರೂಪ್ ಅಧ್ಯಕ್ಷ ರಾಜೇಸಾಬ ಸೈಯದಬಡೆ, ಉಪಾಧ್ಯಕ್ಷ ಚಮನಸಾಬ ಹಾದಿಮನಿ, ಅಂಜುಮನ ಸಂಸ್ಥೆ ಅಧ್ಯಕ್ಷ ತಾಜುದ್ದೀನ ಕಿಂಡ್ರಿ, ನೂತನ ಚಾಂದ ಮುಬಾರಕ ಕಮಿಟಿ ಅಧ್ಯಕ್ಷ ಮಹ್ಮದಇಸ್ಮಾಯಿಲ್ ಖಾಜಿ, ಹಿರಿಯರಾದ ಅಬ್ದುಲಹಮೀದ ಮುಜಾವರ, ಮಹಮ್ಮದ್ ರಫೀಕ್ ದಲೀಲ, ದಾವಲಸಾಬ ಲಕ್ಷೆö್ಮÃಶ್ವರ, ಹೈದರ ಖವಾಸ, ಮುನ್ನಾ ಢಾಲಾಯತ, ಖಲಂದರ ಗಾಡಿ, ದಾವೂದ ಜಮಾಲ್, ಪ್ರಭಾರಿ ಮುಖ್ಯ ಶಿಕ್ಷಕ ಎಸ್.ಜಿ. ಉಮರ್ಜಿ ಹಾಗೂ ಶಾಲಾ ಶಿಕ್ಷಕರು, ಸಿಬ್ಬಂದಿವರ್ಗದವರು ಹಾಜರಿದ್ದರು.