ಶರಣ ಮಾದಯ್ಯ ಕಾಯಕ ಜೀವಿಯಾಗಿದ್ದರು : ಡಾ.ಶಿವಾನಂದ ಹೂಗಾರ

0
Jayanti celebration of Basavadi Sharan florist Madaiya
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಹೂಗಾರ ಸಮಾಜದವರು ಹೂವಿನ ಮನಸ್ಸು ಹೊಂದಿದವರು. ಹೂವು ಬಾಡುತ್ತದೆ, ಆದರೆ ಹೂಗಾರ ಸಮಾಜದವರ ಮನಸ್ಸು ಬಾಡದೆ, ಸಮಾಜವನ್ನು ಅರಳಿಸುವ ಕೆಲಸ ಮಾಡುತ್ತಿದೆ ಎಂದು ಸಮಾಜದ ಹಿರಿಯರಾದ ಡಾ.ಶಿವಾನಂದ ಹೂಗಾರ ಹೇಳಿದರು.

Advertisement

ಅವರು ಪಟ್ಟಣದ ಸರಾಫ್ ಬಜಾರದಲ್ಲಿರುವ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಬುಧವಾರ ಸಮಾಜದ ವತಿಯಿಂದ ಬಸವಾದಿ ಶರಣ ಹೂಗಾರ ಮಾದಯ್ಯನವರ ಜಯಂತಿ ಆಚರಣೆಯ ಅಂಗವಾಗಿ ಮಾದಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.12 ನೇ ಶತಮಾನದಲ್ಲಿ ರಾಜನಾದ ಸಕಲೇಶ ಮಾದರಸ ಹಾಗೂ ಹೂಗಾರ ಮಾದಯ್ಯನವರು, ಕಾಯಕದಲ್ಲಿ ಮುಕ್ತಿ ಮಾರ್ಗವಿದೆ ಎಂದು ಜಗತ್ತಿಗೆ ಸಾರಿದ್ದಾರೆ. ಕಾಯಕ ಜೀವಿಯಾಗಿದ್ದ ಶರಣ ಮಾದಯ್ಯ ಯಾರ ಮನಸ್ಸಿಗೂ ನೋವು ಮಾಡಿದವರಲ್ಲ. ಇಡೀ ಜಗತ್ತಿಗೆ ಅವರು ನೀಡಿದ ಸಂದೇಶಗಳು ಸದಾ ಸ್ಮರಣೀಯವಾಗಿದ್ದು, ಅವರ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಕಾರ್ಯ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಡಾ.ಶೇಖರ ಹೂವಿನ, ಚನವೀರಪ್ಪ ಹೂಗಾರ, ಟಿ.ಎಸ್. ಹೂಗಾರ, ವಿರೂಪಾಕ್ಷಪ್ಪ ಹೂಗಾರ, ಫಕ್ಕೀರಪ್ಪ ಹೂಗಾರ, ಶಿವಾನಂದ ಹೂಗಾರ, ಶ್ರೀಕಾಂತ ಹೂಗಾರ, ಗಂಗಾಧರ, ಯಲ್ಲಪ್ಪ, ರಾಜು ಹೂವಿನ, ಮಂಜುಳಾ ಹೂಗಾರ, ಜಯಶ್ರೀ ಹೂಗಾರ, ಜ್ಯೋತಿ ಹೂಗಾರ ಸೇರಿದಂತೆ ಅನೇಕರು ಹಾಜರಿದ್ದರು.


Spread the love

LEAVE A REPLY

Please enter your comment!
Please enter your name here