HomeGadag Newsಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಸಮೀಪದ ಬಾಲೇಹೊಸೂರು ಶ್ರೀ ಗುರು ದಿಂಗಾಲೇಶ್ವರ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಸೂರಣಗಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯು ಅತ್ಯಂತ ವಿಜೃಂಭಣೆಯಿಂದ ಜರುಗಿತು.

ಕಾರ್ಯಕ್ರಮದಲ್ಲಿ ಬಿಆರ್‌ಪಿ ಬಿ.ಎಂ. ಯರಗುಪ್ಪಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳಲ್ಲಿರುವ ಸೂಕ್ತ ಪ್ರತಿಭೆ ಹೊರಹೊಮ್ಮಲು ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳನ್ನು ಇಲಾಖೆ ಹಮ್ಮಿಕೊಂಡಿದೆ. ಆದ್ದರಿಂದ ಸೂಕ್ತ ಪ್ರತಿಭೆಗಳನ್ನು ಗುರುತಿಸಿ ನಿಮ್ಮ ನಿರ್ಣಯಕ್ಕೆ ಬೆಲೆ ತರುವಂತೆ ನಿರ್ಣಯ ನೀಡಿ ಎಂದು ನಿರ್ಣಾಯಕರಿಗೆ ಕಿವಿಮಾತು ಹೇಳಿದರು.

ಬಿಆರ್‌ಪಿ ವಾಸು ದೀಪಾಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳನ್ನು ಸರ್ವತೋಮುಖ ಅಭಿವೃದ್ಧಿಯತ್ತ ಒಯ್ಯಲು ಇಂತಹ ಕಾರ್ಯಕ್ರಮಗಳು ಮಕ್ಕಳಿಗೆ ಅತಿ ಅವಶ್ಯವೆಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷ ಪರಶುರಾಮ ಮೈಲಾರಿ ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾ.ಪಂ ಸದಸ್ಯರು, ಕಾರ್ಯಕ್ರಮದ ರೂವಾರಿಗಳಾದ ಸೂರಣಿಗಿ, ಸಿಆರ್‌ಪಿ ಲೋಕೇಶ್ ಮಠದ, ಕೋಗುನೂರು ಸಿಆಆರ್‌ಪಿ ಸತೀಶ್ ಪಶುಪತಿಹಾಳ, ಎಂ.ಎನ್. ಭರಮಗೌಡ್ರು, ಬಸವರಾಜ್ ಹತ್ತಿಕಾಳ, ಎಸ್‌ಡಿಎಂಸಿ ಅಧ್ಯಕ್ಷ ಹಾಲೇಶ್ ಜಾಲವಾಡಗಿ ಉಪಸ್ಥಿತರಿದ್ದರು. ಖಾದರಸಾಬ್ ನದಾಫ್, ತೇಜಸ್ವಿನಿ ಬಡಿಗೇರ, ಮುತ್ತಣ್ಣ ಹುಬ್ಬಳ್ಳಿ, ಸಿದ್ದಪ್ಪ ಸಜ್ಜಗಾರ್ ರಂಜಿತಾ ಮರಳಿಹಳ್ಳಿ ನಿರೂಪಿಸಿದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img