ಧಾರವಾಡ: ಬಡ್ಡಿ ಕಿರುಕುಳಕ್ಕೆ ಬೇಸತ್ತು ವ್ಯಕ್ತಿ ಆತ್ಮಹತ್ಯೆಗೆ ಯತ್ನಸಿರುವ ಘಟನೆ ಧಾರವಾಡ ನಗರದ ಗೊಲ್ಲರ ಕಾಲೋನಿಯಲ್ಲಿ ನಡೆದಿದೆ. ನಜೀರ್ ಸಾಬ ಅತ್ತಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಸಿದ ವ್ಯಕ್ತಿಯಾಗಿದ್ದು, ಖಾಸಗಿ ವ್ಯಕ್ತಿಯಿಂದ ಬಡ್ಡಿ ರೂಪದಲ್ಲಿ ಹಣ ಪಡೆದಿದ್ದರು.
ಸಾಲ ಕೊಟ್ಟವರು ಬಡ್ಡಿ ಹಣಕ್ಕೆ ಪೀಡಿಸಿದ ಹಿನ್ನೆಲೆಯಲ್ಲಿ ವಿಷ ಸೇವಿಸಿದ್ದಾರೆ. ಇನ್ನೂ ಅಸ್ವಸ್ಥ ನಜೀರ್ ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದು, ಘಟನೆ ಸಂಬಂಧ ಧಾರವಾಡ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.



