ಬೆಂಗಳೂರು: ರ್ಯಾಂಬೋ ಸಿನಿಮಾ ಶೈಲಿಯಲ್ಲಿ ಕಳ್ಳತನ ಮಾಡ್ತಿದ್ದ ಗ್ಯಾಂಗ್ ಅನ್ನು ಅರೆಸ್ಟ್ ಮಾಡುವಲ್ಲಿ ಪರಪ್ಪನ ಅಗ್ರಹಾರ ಪೊಲೀಸರು ಯಶಸ್ವಿಯಾಗಿದ್ದಾರೆ. ಶಬಾಜ್ ಖಾನ್ ಹಾಗೂ ಓಂ ಬಂಧಿತ ಆರೋಪಿಗಳು. ಒಮ್ಮೆ ಬೈಕ್ ಕದ್ದು ಆನ್ಲೈನ್ ನಲ್ಲಿ ಮಾರಾಟ ಮಾಡಿದ್ದರು. ನಂತರ ಆನ್ಲೈನ್ನಲ್ಲಿ ಕಸ್ಟಮರ್ಗಳು ಒಬ್ಬರ ಮೂಲಕ ಮತ್ತೊಬ್ಬರ ಪರಿಚಯವಾಗಿತ್ತು.
15 ರಿಂದ 20 ಸಾವಿರಕ್ಕೆ ಬೈಕ್ ಮಾರಾಟ ಮಾಡುತ್ತಿದ್ದರು. ಮಾರಾಟದ ವೇಳೆ ಯಾರಿಗಾದರೂ ಕಡಿಮೆ ಬೆಲೆಗೆ ಯಾವ ಬೈಕ್ ಬೇಕಾದರೂ ಕೊಡುತ್ತಿವಿ ಎಂದು ಹೇಳುತ್ತಿದ್ದರು. ಕಸ್ಟಮರ್ ಸಿಕ್ಕಾಗ ನಿಮಗೆ ಯಾವ ಮಾದರಿಯ, ಯಾವ ಮಾಡೆಲ್ನ ಯಾವ ಕಂಪನಿಯ ಬೈಕ್ ಬೇಕೆಂದು ಮಾಹಿತಿ ಪಡೆಯುತ್ತಿದ್ದರು.
ಬೈಕ್ ಹ್ಯಾಂಡಲ್ ಲಾಕ್ ಮುರಿದು ಕಳ್ಳತನ ಮಾಡುತ್ತಿದ್ದರು. ಕದ್ದ ಹಣದಿಂದ ವಿಲಾಸಿ ಜೀವನ ನಡೆಸುತ್ತಿದ್ದರು. ಬಂಧಿತರಿಂದ ಒಟ್ಟು 12.5 ಲಕ್ಷ ಮೌಲ್ಯದ 13 ಬೈಕ್ ವಶಕ್ಕೆ ಪಡೆಯಲಾಗಿದೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.