ಬೆಂಗಳೂರು: ಚಿನ್ನಾಭರಣ ಕದ್ದು ತಮ್ಮ ಸ್ನೇಹಿತರಿಗೇ ಮಾರಾಟ ಮಾಡ್ತಿದ್ದ ಖದೀಮರನ್ನು ಬಂಧಿಸುವಲ್ಲಿ ಬಾಗಲೂರು ಪೊಲೀಸರು ಯಶಸ್ವಿಯಾಗಿದ್ದಾರೆ. ರಾಮ್ ಕುಮಾರ್(23), ಇಸೈರಾಜ್(27) ಇಬ್ಬರು ಬಂಧಿತ ಆರೋಪಿಗಳಾಗಿದ್ದು, ಎಲ್ಲಾ ಮನೆಯಲ್ಲಿ ಮಲಗಿರುವ ಸಮಯದಲ್ಲೇ ಕನ್ನ ಹಾಕ್ತಿದ್ದರು. ಬಾಗಲೂರು ವ್ಯಾಪ್ತಿಯ ಕಣ್ಣೂರುಹಳ್ಳಿಯ ವಿಲ್ಲಾದಲ್ಲಿ ಕೈಚಳಕ ತೋರಿದ್ದರು.
Advertisement
ವಿಲ್ಲಾ ಮಾಲೀಕರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿದ್ದ ಪೊಲೀಸರು ಸಿಸಿಟಿವಿ, ಟವರ್ ಲೊಕೇಶನ್ ಟ್ರ್ಯಾಕ್ ಮಾಡಿ ಕಳ್ಳರಿಗೆ ಬಲೆ ಬೀಸಿದ್ದರು. ಒಂದು ತಿಂಗಳ ಬಳಿಕ ತಮಿಳುನಾಡಿನಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಬಂಧನದ ಬಳಿಕ ಈ ಹಿಂದೆ ಕಳ್ಳತನ ಮಾಡಿದ್ದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಬಂಧಿತರಿಂದ ಒಟ್ಟು 30 ಲಕ್ಣ ಮೌಲ್ಯದ 437 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.