ವಿಜಯಸಾಕ್ಷಿ ಸುದ್ದಿ, ಗದಗ: ಎಸ್‌ಎಸ್‌ಎಲ್‌ಸಿ ಉತ್ತರ ಪತ್ರಿಕೆಗಳ ಮರುಮೌಲ್ಯಮಾಪನದ ಬಳಿಕ ಗದಗ ಗ್ರಾಮೀಣ ವಲಯದ ಬ್ರೈಟ್ ಹಾರೈಝನ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ವೈಷ್ಣವಿ ಲಮಾಣಿ 625ಕ್ಕೆ 620 ಅಂಕಗಳನ್ನು ಪಡೆದು 99.2 ಶೇಕಡಾ ಫಲಿತಾಂಶದೊಂದಿಗೆ ಗದಗ ಗ್ರಾಮೀಣ ವಲಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ.
ಮರುಮೌಲ್ಯಮಾಪನದ ನಂತರ ಅಂಕಗಳಲ್ಲಿ ಏರಿಕೆಯಾಗಿದ್ದು, ವೈಷ್ಣವಿ ಸಾಧನೆಗೆ ಶಾಲೆಯ ಶಿಕ್ಷಕರು, ಪೋಷಕರು ಹಾಗೂ ಸಾರ್ವಜನಿಕರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.
ವಿದ್ಯಾರ್ಥಿನಿಯ ಶ್ರಮ, ಏಕಾಗ್ರತೆ ಹಾಗೂ ಶಿಕ್ಷಕರ ಮಾರ್ಗದರ್ಶನದಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಶಾಲೆಯ ಆಡಳಿತ ಮಂಡಳಿ ಸಂತಸ ವ್ಯಕ್ತಪಡಿಸಿದೆ.



