• About
  • Advertise
  • Privacy & Policy
  • Contact
Monday, November 23, 2026
Vijaya Sakshi News
Advertisement
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
Vijaya Sakshi News
  • Home
  • Gadag News
  • Karnataka News
  • Crime News
  • Politics News
  • Bengaluru News
  • Entertainment
  • Life Style
  • Sports News
Home Crime News

ಲೋಕಾಯುಕ್ತ ಅಧಿಕಾರಿಗಳ ಸೋಗಿನಲ್ಲಿ ಹಣ ವಸೂಲಿ ಆರೋಪ: ಬೆಂಗಳೂರಿನಲ್ಲಿ RTI ಕಾರ್ಯಕರ್ತನ ಬಂಧನ!

Vijaya Sakshi News Desk by Vijaya Sakshi News Desk
October 8, 2026
in Crime News
0
SHARES
5
VIEWS
Share on Facebook

ಬೆಂಗಳೂರು: ಲೋಕಾಯುಕ್ತ ಅಧಿಕಾರಿಗಳ ಸೋಗಿನಲ್ಲಿ ಸರ್ಕಾರಿ ಅಧಿಕಾರಿಗಳಿಂದ ಹಣ ವಸೂಲಿ ಮಾಡುತ್ತಿದ್ದ ಆರೋಪದ ಮೇಲೆ ಆರ್‌ಟಿಐ ಕಾರ್ಯಕರ್ತನೊಬ್ಬನನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ. ಕೋಲಾರ ಮೂಲದ ಮುರಳಿ (45) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಮುರಳಿ ಲೋಕಾಯುಕ್ತ ಅಧಿಕಾರಿಗಳ ಲೆಟರ್‌ಹೆಡ್‌ಗಳನ್ನು ನಕಲು ಮಾಡುತ್ತಿದ್ದ. ಬಳಿಕ ಅವುಗಳನ್ನು ಬಳಸಿಕೊಂಡು ಸರ್ಕಾರಿ ಅಧಿಕಾರಿಗಳಿಗೆ ನಕಲಿ ದಾಖಲೆಗಳನ್ನು ಕಳುಹಿಸಿ ಹಣಕ್ಕೆ ಬೇಡಿಕೆ ಇಡುತ್ತಿದ್ದ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಅರಣ್ಯ ಇಲಾಖೆ ಅಧಿಕಾರಿಯಂತೆ ಬಿಂಬಿಸಲು ನಕಲಿ ಗುರುತಿನ ಚೀಟಿಯನ್ನೂ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಲೋಕಾಯುಕ್ತದಲ್ಲಿ ದೂರು ಸಲ್ಲಿಸಲು ಬಳಸುವ ನೈಜ ದೂರು ನಮೂನೆಗಳು ಹಾಗೂ ಅಫಿಡವಿಟ್ ಮಾದರಿಗಳನ್ನು ಆರೋಪಿ ದುರ್ಬಳಕೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈಗಾಗಲೇ ದಾಖಲಾಗಿದ್ದ ದೂರುಗಳಲ್ಲಿನ ಹೆಸರು ಮತ್ತು ಇತರ ವಿವರಗಳನ್ನು ಬದಲಾಯಿಸಿ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಹೊಸದಾಗಿ ಭ್ರಷ್ಟಾಚಾರ ದೂರು ದಾಖಲಾಗಿದೆ ಎಂಬಂತೆ ನಕಲಿ ದಾಖಲೆಗಳನ್ನು ಸಿದ್ಧಪಡಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ನಂತರ ಈ ನಕಲಿ ದಾಖಲೆಗಳನ್ನು ಸಂಬಂಧಪಟ್ಟ ಸರ್ಕಾರಿ ಅಧಿಕಾರಿಗಳ ವಿಳಾಸಕ್ಕೆ ಕಳುಹಿಸುತ್ತಿದ್ದ. ಕೆಲ ದಿನಗಳ ಬಳಿಕ ಅಧಿಕಾರಿಗಳನ್ನು ಸಂಪರ್ಕಿಸಿ, ಅವರ ವಿರುದ್ಧ ದಾಖಲಾಗಿರುವುದಾಗಿ ಬಿಂಬಿಸಿದ ದೂರುಗಳನ್ನು ಸೆಟಲ್ ಮಾಡಿಸುವ ಅಥವಾ ಹಿಂಪಡೆಯುವ ಭರವಸೆ ನೀಡುತ್ತಿದ್ದ. ಇದಕ್ಕಾಗಿ 3,000 ರೂ.ನಿಂದ 50,000 ರೂ.ವರೆಗೆ ಹಣಕ್ಕೆ ಬೇಡಿಕೆ ಇಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ನಕಲಿ ದೂರು ಮೂಲಕ ವಂಚನೆ ಬೆಳಕಿಗೆ

ಅರಣ್ಯ ಇಲಾಖೆ ಅಧಿಕಾರಿಯೊಬ್ಬರಿಗೆ ಇದೇ ರೀತಿಯ ನಕಲಿ ದೂರು ತಲುಪಿದ ಬಳಿಕ ಅವರು ಲೋಕಾಯುಕ್ತ ಕಚೇರಿಯನ್ನು ಸಂಪರ್ಕಿಸಿ ದೂರುದ ವಿವರಗಳನ್ನು ಪರಿಶೀಲಿಸಿದ್ದರು. ಈ ವೇಳೆ ಲೋಕಾಯುಕ್ತದ ದಾಖಲೆಗಳಲ್ಲಿ ಅಂತಹ ಯಾವುದೇ ದೂರು ದಾಖಲಾಗಿಲ್ಲ ಎಂಬುದು ತಿಳಿದುಬಂದಿದ್ದು, ಬಳಿಕ ವಂಚನೆಯ ಪ್ರಕರಣ ಬೆಳಕಿಗೆ ಬಂದಿದೆ.

ಇದಾದ ಬಳಿಕ ಪೊಲೀಸರು ತನಿಖೆ ಕೈಗೊಂಡಿದ್ದು, ಹಣ ವಸೂಲಿ ಮಾಡಲು ಆರೋಪಿ ಬಳಸಿದ್ದ ಬ್ಯಾಂಕ್ ಖಾತೆಗಳ ವಹಿವಾಟಿನ ಬಗ್ಗೆಯೂ ಪರಿಶೀಲನೆ ನಡೆಸುತ್ತಿದ್ದಾರೆ. ತನಿಖೆಯಲ್ಲಿ ಈ ಖಾತೆಗಳು ಮೂರನೇ ವ್ಯಕ್ತಿಗಳ ಹೆಸರಿನಲ್ಲಿ ನೋಂದಣಿಯಾಗಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಖಾತೆದಾರರಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದು, ಮುರಳಿಯೊಂದಿಗಿನ ಅವರ ಸಂಬಂಧ ಹಾಗೂ ಹಣದ ವಹಿವಾಟಿನಲ್ಲಿ ಅವರ ಪಾತ್ರವೇನು ಎಂಬುದರ ಕುರಿತು ವಿಚಾರಣೆ ನಡೆಸುತ್ತಿದ್ದಾರೆ.

ಇದೇ ರೀತಿಯ ವಿಧಾನವನ್ನು ಬಳಸಿಕೊಂಡು ಮುರಳಿ ಈ ಹಿಂದೆ ಇತರ ಸರ್ಕಾರಿ ಅಧಿಕಾರಿಗಳಿಗೂ ನಕಲಿ ಲೋಕಾಯುಕ್ತ ದೂರುಗಳನ್ನು ಕಳುಹಿಸಿ ಹಣ ವಸೂಲಿ ಮಾಡಿದ್ದಾನೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Tags: ̈́BengaluruBreakingNewsKarnatakalokayuktaNewsHeadlinesVidhana Soudha PoliceVijayasakshivijayasakshinewsಆರ್‌ಟಿಐ ಕಾರ್ಯಕರ್ತಬೆಂಗಳೂರು:-ವಿಧಾನಸೌಧ ಪೊಲೀಸರು
ShareSendShare
Previous Post

ಜೀವಂತ ವ್ಯಕ್ತಿಯನ್ನು ಮೃತರೆಂದು ಬಿಂಬಿಸಿ ಮತದಾರರ ಪಟ್ಟಿಯಿಂದ ಹೆಸರು ತೆಗೆಯಲು ಯತ್ನ ಆರೋಪ: ಶಾಸಕ ಯತ್ನಾಳ್ ವಿರುದ್ಧ FIR

Next Post

ಆನ್ ಲೈನ್ ಗೇಮ್ʼಗೆ ಹಣ ನೀಡುವಂತೆ ಸ್ನೇಹಿತರ ಒತ್ತಡ; 13 ವರ್ಷದ ಬಾಲಕ ಆತ್ಮಹತ್ಯೆ

Vijaya Sakshi News Desk

Vijaya Sakshi News Desk

Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

Next Post

ಆನ್ ಲೈನ್ ಗೇಮ್ʼಗೆ ಹಣ ನೀಡುವಂತೆ ಸ್ನೇಹಿತರ ಒತ್ತಡ; 13 ವರ್ಷದ ಬಾಲಕ ಆತ್ಮಹತ್ಯೆ

Stay Connected test

  • 24k Followers
  • 99 Subscribers
  • Trending
  • Comments
  • Latest

ಪೊಲೀಸ್ ವೇಷದಲ್ಲಿ ಅಮಾಯಕರಿಗೆ ಬೆದರಿಕೆ: ಸಂಜಯ ಕೊಪ್ಪದ ಬಂಧನಕ್ಕೆ ಸರ್ಕಾರದ ಮುದ್ರೆ

October 24, 2026
ಗದಗದಲ್ಲಿ ಆಹಾರದ ಹೆಸರಿನಲ್ಲಿ ಜನರ ಆರೋಗ್ಯದ ಜೊತೆ ಚೆಲ್ಲಾಟ! ಖಾರದಪುಡಿ ಘಟಕ ಸೀಜ್, ಹೋಟೆಲ್‌ನಲ್ಲಿ ಕೊಳೆತ ಮೀನು ಮಾಂಸ ಪತ್ತೆ

ಗದಗದಲ್ಲಿ ಆಹಾರದ ಹೆಸರಿನಲ್ಲಿ ಜನರ ಆರೋಗ್ಯದ ಜೊತೆ ಚೆಲ್ಲಾಟ! ಖಾರದಪುಡಿ ಘಟಕ ಸೀಜ್, ಹೋಟೆಲ್‌ನಲ್ಲಿ ಕೊಳೆತ ಮೀನು ಮಾಂಸ ಪತ್ತೆ

November 19, 2026
ಲಕ್ಷ್ಮೇಶ್ವರ, ಶಿರಹಟ್ಟಿಯಲ್ಲಿ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಪರಿಶೀಲನೆ

ಲಕ್ಷ್ಮೇಶ್ವರ, ಶಿರಹಟ್ಟಿಯಲ್ಲಿ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಪರಿಶೀಲನೆ

November 4, 2026
ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

October 23, 2026
Single Post Template – Fast News

ದೇವಸ್ಥಾನದಲ್ಲಿ 3 ಕೊಲೆ: ಹುಂಡಿಗಳ್ಳರ ಅಮಾನುಷ ಕೃತ್ಯ

0
Single Post Template – Fast News

ಕೋಡಿಹಳ್ಳಿಯವರಿಗೆ ಇಷ್ಟೊಂದು ಅಜ್ಞಾನ ಇದೆ ಅಂತ ಗೊತ್ತಿರಲಿಲ್ಲ: ಬಿ.ಸಿ.ಪಾಟೀಲ

0
Single Post Template – Fast News

ಕತ್ತಲಲ್ಲಿ ಕ್ವಾರಂಟೈನ್ ಸೆಂಟರ್; ಪರದಾಡಿದ ಕೊವಿಡ್ ರೋಗಿಗಳು!

0
Single Post Template – Fast News

ನಗರಸಭೆ ಆಯುಕ್ತರ ಕುರ್ಚಿ ಮಾರಾಟವಾಯ್ತೆ?
ಉಸ್ತುವಾರಿ ಸಚಿವರು ತಮ್ಮ ಹಠ ಸಾಧಿಸಿಯೇ ಬಿಟ್ಟರೆ?

0
ಭಾರತದಲ್ಲಿ ಚಿನ್ನದ ಆಮದು ಶೇ.40ರಷ್ಟು ಕುಸಿತ: 7 ತಿಂಗಳಲ್ಲಿ 24.7 ಬಿಲಿಯನ್ ಡಾಲರ್ʼಗೆ ಇಳಿಕೆ, ಕಾರಣವೇನು?

ಭಾರತದಲ್ಲಿ ಚಿನ್ನದ ಆಮದು ಶೇ.40ರಷ್ಟು ಕುಸಿತ: 7 ತಿಂಗಳಲ್ಲಿ 24.7 ಬಿಲಿಯನ್ ಡಾಲರ್ʼಗೆ ಇಳಿಕೆ, ಕಾರಣವೇನು?

November 23, 2026
ರಷ್ಯಾಗೆ ಮತ್ತೊಂದು ಆಘಾತ: ಲಿಬಿಯಾ ಬಂದರಿನಲ್ಲಿ ಉಕ್ರೇನ್ ಡ್ರೋನ್ ಅಟ್ಯಾಕ್! 2 ಹಡಗು ಮುಳುಗಡೆ

ರಷ್ಯಾಗೆ ಮತ್ತೊಂದು ಆಘಾತ: ಲಿಬಿಯಾ ಬಂದರಿನಲ್ಲಿ ಉಕ್ರೇನ್ ಡ್ರೋನ್ ಅಟ್ಯಾಕ್! 2 ಹಡಗು ಮುಳುಗಡೆ

November 23, 2026
ಆಸ್ಟ್ರೇಲಿಯಾ ತಂಡದ ಪ್ರತಿಯೊಬ್ಬರಿಗೂ ಬಾಲ್ ಟ್ಯಾಂಪರಿಂಗ್ ಗೊತ್ತಿತ್ತು: ಎಬಿ ಡಿವಿಲಿಯರ್ಸ್

ಆಸ್ಟ್ರೇಲಿಯಾ ತಂಡದ ಪ್ರತಿಯೊಬ್ಬರಿಗೂ ಬಾಲ್ ಟ್ಯಾಂಪರಿಂಗ್ ಗೊತ್ತಿತ್ತು: ಎಬಿ ಡಿವಿಲಿಯರ್ಸ್

November 23, 2026
ಕಾಪು ಬೀಚ್ʼನಲ್ಲಿ ಬೃಹತ್ ಅಲೆಗಳ ಅಬ್ಬರಕ್ಕೆ ಇಬ್ಬರು ಯುವಕರು ಬಲಿ; ನಾಪತ್ತೆಯಾಗಿದ್ದವರ ಮೃತದೇಹ ಪತ್ತೆ

ಕಾಪು ಬೀಚ್ʼನಲ್ಲಿ ಬೃಹತ್ ಅಲೆಗಳ ಅಬ್ಬರಕ್ಕೆ ಇಬ್ಬರು ಯುವಕರು ಬಲಿ; ನಾಪತ್ತೆಯಾಗಿದ್ದವರ ಮೃತದೇಹ ಪತ್ತೆ

November 23, 2026

Recent News

We bring you the best Premium WordPress Themes that perfect for news, magazine, personal blog, etc. Check our landing page for details.

Browse by Category

Recent News

ಭಾರತದಲ್ಲಿ ಚಿನ್ನದ ಆಮದು ಶೇ.40ರಷ್ಟು ಕುಸಿತ: 7 ತಿಂಗಳಲ್ಲಿ 24.7 ಬಿಲಿಯನ್ ಡಾಲರ್ʼಗೆ ಇಳಿಕೆ, ಕಾರಣವೇನು?

ಭಾರತದಲ್ಲಿ ಚಿನ್ನದ ಆಮದು ಶೇ.40ರಷ್ಟು ಕುಸಿತ: 7 ತಿಂಗಳಲ್ಲಿ 24.7 ಬಿಲಿಯನ್ ಡಾಲರ್ʼಗೆ ಇಳಿಕೆ, ಕಾರಣವೇನು?

November 23, 2026
ರಷ್ಯಾಗೆ ಮತ್ತೊಂದು ಆಘಾತ: ಲಿಬಿಯಾ ಬಂದರಿನಲ್ಲಿ ಉಕ್ರೇನ್ ಡ್ರೋನ್ ಅಟ್ಯಾಕ್! 2 ಹಡಗು ಮುಳುಗಡೆ

ರಷ್ಯಾಗೆ ಮತ್ತೊಂದು ಆಘಾತ: ಲಿಬಿಯಾ ಬಂದರಿನಲ್ಲಿ ಉಕ್ರೇನ್ ಡ್ರೋನ್ ಅಟ್ಯಾಕ್! 2 ಹಡಗು ಮುಳುಗಡೆ

November 23, 2026
  • About
  • Advertise
  • Privacy & Policy
  • Contact

Vijaya Sakshi 2026 CREATED BY Kalahamsa Infotech. PREMIUM WEBSITE SOLUTIONS.

error: Content is protected !!
Join WhatsApp ▤ Read E-Paper