ಕನ್ನಡ ಕೇವಲ ಭಾಷೆಯಲ್ಲ : ಜಿ.ಎಸ್. ಪಾಟೀಲ

0
MLA G.S. welcomed the Kannada chariot that arrived at Gajendragad. Patil
Spread the love

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ರಾಜ್ಯದ ನೆಲ, ಜಲ ಹಾಗೂ ಭೂಮಿಯ ರಕ್ಷಣೆ ವಿಚಾರದಲ್ಲಿ ರಾಜಿ ಇಲ್ಲದ ಆಡಳಿತ ನಡೆಸುತ್ತಿರುವ ರಾಜ್ಯ ಸರ್ಕಾರ ಪ್ರತಿ ಕನ್ನಡಿಗರ ಅಸ್ಮಿತೆಗೆ ಧಕ್ಕೆ ಬಾರದಂತೆ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.

Advertisement

ಮಂಡ್ಯದಲ್ಲಿ ಡಿಸೆಂಬರ್‌ನಲ್ಲಿ ಜರುಗಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ರಾಜ್ಯಾದ್ಯಂತ ಸಂಚರಿಸುತ್ತಿರುವ ಕನ್ನಡ ಜ್ಯೋತಿ ರಥವನ್ನು ಪಟ್ಟಣದ ಟಿಟಿಡಿ ಕಲ್ಯಾಣ ಮಂಟಪದ ಬಳಿ ಸ್ವಾಗತ ಕೋರಿ ಅವರು ಮಾತನಾಡಿದರು.

ಕನ್ನಡ ಕೇವಲ ಭಾಷೆಯಲ್ಲ. ತನ್ನದೇ ಆದ ನೆಲ, ಜಲ ಹಾಗೂ ಸಂಸ್ಕೃತಿಯನ್ನು ಒಳಗೊಂಡಿದೆ. ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷ ಪೂಣ್ಗೊಳ್ಳುವುದರ ಜೊತೆಗೆ ಡಿ.20ರಿಂದ ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕನ್ನಡ ಜ್ಯೋತಿ ರಥವು 87 ದಿನಗಳ ಕಾಲ ರಾಜ್ಯದ 240 ತಾಲೂಕು ಕೇಂದ್ರಗಳಲ್ಲಿ ಸಂಚರಿಸುತ್ತಿದೆ. ಇದರ ಭಾಗವಾಗಿ ಗಜೇಂದ್ರಗಡ ತಾಲೂಕಿಗೆ ಆಗಮಿಸಿದ ಸಂದರ್ಭದಲ್ಲಿ ಕನ್ನಡಾಭಿಮಾನಿಗಳು ಹೆಮ್ಮೆಯಿಂದ ಪಾಲ್ಗೊಂಡಿದ್ದಾರೆ ಎಂದರು.

ಪಟ್ಟಣದ ಟಿಟಿಡಿ ಕಲ್ಯಾಣ ಮಂಟಪದ ಬಳಿ ಆಗಮಿಸಿದ ಕನ್ನಡ ರಥಕ್ಕೆ ಅದ್ಧೂರಿ ಸ್ವಾಗತ ಕೋರಿದ ಬಳಿಕ ಶಾಸಕ ಜಿ.ಎಸ್. ಪಾಟೀಲ, ತಹಸೀಲ್ದಾರ್ ಕಿರಣಕುಮರ ಕುಲಕರ್ಣಿ, ಮೈಸೂರ ಮಠದ ವಿಜಯಮಹಾಂತ ಸ್ವಾಮೀಜಿ, ಟಕ್ಕೇದ ದರ್ಗಾದ ನಿಜಾಮುದ್ದೀನಶಾ ಆಶ್ರಫಿ ಮಕಾನದಾರ ಸೇರಿ ಪುರಸಭೆ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು, ಆಶಾ ಕಾರ್ಯಕರ್ತರು, ಸಾಹಿತಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿ ಅನೇಕರು ಕನ್ನಡ ರಥದೊಂದಿಗೆ ಹೆಜ್ಜೆ ಹಾಕುತ್ತಾ ಬಸ್ ನಿಲ್ದಾಣ, ಕಾಲಕಾಲೇಶ್ವರ ವೃತ್ತ, ಎಪಿಎಂಸಿ ಮಾರ್ಗವಾಗಿ ರೋಣ ಪಟ್ಟಣಕ್ಕೆ ರಥವನ್ನು ಬೀಳ್ಕೊಟ್ಟರು.

ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ, ಸಿದ್ದಪ್ಪ ಬಂಡಿ, ಎಚ್.ಎಚ್. ಸೋಂಪುರ, ಅಶೋಕ ಬಾಗಮಾರ, ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ, ತಾಲೂಕಾಧ್ಯಕ್ಷ ಎ.ಪಿ. ಗಾಣಿಗೇರ, ಪುರಸಭೆ ಸದಸ್ಯರಾದ ಶಿವರಾಜ ಘೋರ್ಪಡೆ, ರಾಜು ಸಾಂಗ್ಲಿಕರ, ಮಾಜಿ ಸದಸ್ಯ ಎಂ.ಎಸ್. ಹಡಪದ, ಎಫ್.ಎಸ್. ಕರಿದುರಗನವರ, ಬಸವರಾಜ ಹೂಗಾರ, ಸಿದ್ದಣ್ಣ ಚೋಳಿನ, ಶರಣು ಪೂಜಾರ, ತಾ.ಪಂ ಇಒ ಬಸವರಾಜ ಬಡಿಗೇರ, ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ, ಗಣೇಶ ಕೊಡಕೇರಿ, ರಾಘವೇಂದ್ರ ಮಂತಾ, ಪಿಎಸ್‌ಐ ಸೋಮಗೌಡ ಗೌಡ್ರ ಮುಂತಾದವರು ಭಾಗವಹಿಸಿದ್ದರು.

ರಾಜ್ಯದಲ್ಲಿ ಕನ್ನಡ ಕಟ್ಟುವ ಕೆಲಸವನ್ನು ಅತ್ಯಂತ ಗಟ್ಟಿ ಧ್ವನಿಯಲ್ಲಿ ಮಾಡುತ್ತಾ ಬಂದಿರುವ ಸಾಹಿತ್ಯ ಪರಿಷತ್ ಕೆಲಸವು ಅನನ್ಯ ಹಾಗೂ ಅಮಘೋವಾದದ್ದು. ರಾಜ್ಯ ಸೇರಿ ಜಿಲ್ಲೆಯಲ್ಲಿ ಅನೇಕ ಅಮೂಲ್ಯವಾದ ಇತಿಹಾಸವನ್ನು ಹೊರತಗೆದು ಯುವ ಸಮೂಹಕ್ಕೆ ಪರಿಚಯಿಸುವ ಕೆಲಸವನ್ನು ಮಾಡುತ್ತ ಬಂದಿದೆ. ಶೀಘ್ರದಲ್ಲೇ ಪಟ್ಟಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಲಾಗುವುದು ಎಂದು ಶಾಸಕ ಜಿ.ಎಸ್. ಪಾಟೀಲ ತಿಳಿಸಿದರು.

 


Spread the love

LEAVE A REPLY

Please enter your comment!
Please enter your name here