ಸುದೀಪ್ ದೊಡ್ಡ ವ್ಯಕ್ತಿ, ಅವರ ಮಾತಿಗೆ ಬೆಲೆ ಕೊಡ್ತೀನಿ: ಲಾಯರ್ ಜಗದೀಶ್!

0
Spread the love

ಸುದೀಪ್​ ಮಾತಿಗೆ ಬೆಲೆ ಕೊಡ್ತೀನಿ, ಇನ್ಮೇಲೆ ಬದಲಾಗ್ತೀನಿ ಎಂದು ಬಿಗ್​ ಬಾಸ್​ನಲ್ಲಿ ಲಾಯರ್ ಜಗದೀಶ್ ಹೇಳಿದ್ದಾರೆ.

Advertisement

ಮೊದಲ ವಾರದಲ್ಲೇ ಜಗದೀಶ್​ ಮಾಡಿದ ಅವಾಂತರಗಳು ಒಂದೆರಡಲ್ಲ. ‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ಶೋನಲ್ಲಿ ಇರುವ ಮಹಿಳಾ ಸ್ಪರ್ಧಿಗಳಿಗೆ ಕಿರಿಕಿರಿ ಆಗುವ ರೀತಿಯಲ್ಲಿ ಪದ ಪ್ರಯೋಗ ಮಾಡಿದ್ದರು. ಬಿಗ್​ ಬಾಸ್​ ಕಾರ್ಯಕ್ರಮಕ್ಕೆ ಅವಮಾನ ಮಾಡುವ ರೀತಿಯಲ್ಲಿ ಅವರು ಕ್ಯಾಮೆರಾ ಎದುರಿನಲ್ಲೇ ಮಾತನಾಡಿದರು. ಬೇಕುಬೇಕಂತಲೇ ನಿಯಮಗಳನ್ನು ಮುರಿದ್ದರು. ಅದಕ್ಕೆಲ್ಲ ಸುದೀಪ್​ ಕ್ಲಾಸ್​ ತೆಗೆದುಕೊಂಡರು.

ಭಾನುವಾರದ ಸಂಚಿಕೆಯಲ್ಲಿ ಧನರಾಜ್​ ಜೊತೆ ಜಗದೀಶ್​ ಮಾತನಾಡುತ್ತಿದ್ದರು. ‘ಇನ್ಮೇಲೆ ನಾನು ಕೋಪ ಮಾಡಿಕೊಳ್ಳುವುದೇ ಇಲ್ಲ. ಸುದೀಪ್​ ಅವರು ಅಷ್ಟೆಲ್ಲ ನನಗೆ ಹೇಳಿದ್ದಾರೆ. ಅಷ್ಟು ದೊಡ್ಡ ವ್ಯಕ್ತಿ ಹೇಳಿದ್ದಕ್ಕೆ ಗೌರವ ನೀಡುತ್ತೇನೆ’ ಎಂದು ಜಗದೀಶ್​ ಹೇಳಿದ್ದಾರೆ.

ಲಾಯರ್​ ಎಂದು ಹೇಳಿಕೊಂಡಿರುವ ಜಗದೀಶ್​ ಅವರು ಬಿಗ್​ ಬಾಸ್​ ಮನೆಯಲ್ಲಿ ಸಖತ್​ ಕೋಪ ಮಾಡಿಕೊಂಡು ಸುದ್ದಿ ಆಗಿದ್ದಾರೆ. ಅವರ ಕೋಪದಿಂದಾಗಿ ಅನೇಕ ಜಗಳಗಳು ಆಗಿವೆ. ಶನಿವಾರದ ಸಂಚಿಕೆಯಲ್ಲಿ ಕಿಚ್ಚ ಸುದೀಪ್​ ಅವರು ಜಗದೀಶ್​ಗೆ ಬುದ್ಧಿವಾದ ಹೇಳಿದ್ದರು. ಅದರ ಪರಿಣಾಮವಾಗಿ ಸಂಪೂರ್ಣ ಬದಲಾಗುವುದಾಗಿ ಜಗದೀಶ್ ತೀರ್ಮಾನಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here