ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಮನೋರಮಾ ಮಹಾವಿದ್ಯಾಲಯದ ಶೈಕ್ಷಣಿಕ ಸಾಲಿನ ಬಿಸಿಎ ಕೋರ್ಸಿನ 6ನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಪೂಜಾ ಮುಳ್ಳಾಳ ಶೇ.97.05 ಅಂಕ ಪಡೆದು ಪ್ರಥಮ, ತಬಸುಮ ಕವಲೂರ ಶೇ.97.00 ಅಂಕ ಪಡೆದು ದ್ವಿತೀಯ, ವೈಷ್ಣವಿ ಮುಂಡರಗಿ ಶೇ.96.05 ಅಂಕ ಪಡೆದು ತೃತೀಯ ಸ್ಥಾನ, ರಚೆಲ ರಿಯಾ ಶೇ. 96.03 ಅಂಕ ಪಡೆದು 4ನೇ ಸ್ಥಾನ, ಪಲ್ಲವಿ ಕೋಳಿವಾಡ ಶೇ.90 ಅಂಕ ಪಡೆದು 5ನೇ ಸ್ಥಾನ ಪಡೆದಿದ್ದಾರೆ.
ಮಹಾವಿದ್ಯಾಲಯಕ್ಕೆ ಕೀರ್ತಿ ತಂದ ವಿದ್ಯಾರ್ಥಿಗಳ ಸಾಧನೆಯನ್ನು ಸಂಸ್ಥೆಯ ಚೇರಮನ್ ಎನ್.ಎಮ್. ಕುಡತರಕರ, ಪ್ರಾಚಾರ್ಯ ಬಿ.ಎಸ್. ಹಿರೇಮಠ, ಸಂಸ್ಥೆಯ ಕಾರ್ಯದರ್ಶಿ ಮಂಜುನಾಥ ಕುಡತರಕರ, ಆಡಳಿತಾಧಿಕಾರಿ ಕಿಶೋರ ಮುದಗಲ್ಲ, ಸಂಸ್ಥೆಯ ನಿರ್ದೇಶಕರಾದ ಸಂಜಯ ಕುಡತರಕರ, ಚೇತನ ಕುಡತರಕರ, ಸಹ ಸಂಯೋಜಕರಾದ ಪ್ರೊ. ಸವಿತಾ ಪೂಜಾರ ಹಾಗೂ ಸಿಬ್ಬಂದಿ ವರ್ಗದವರು ಶ್ಲಾಘಿಸಿದ್ದಾರೆ.



