HomeGadag Newsಮಹಿಳೆಯರು ಸ್ವಾವಲಂಬಿಗಳಾಗಿ : ಪ್ರೊ. ಕವಿತಾ ಕಾಶಪ್ಪನವರ

ಮಹಿಳೆಯರು ಸ್ವಾವಲಂಬಿಗಳಾಗಿ : ಪ್ರೊ. ಕವಿತಾ ಕಾಶಪ್ಪನವರ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಮಹಿಳೆಯರು ಸ್ವ ಉದ್ಯೋಗದಿಂದ ಸ್ವಾವಲಂಬಿಗಳಾಗಿ ತಮ್ಮ ಕಾಲ ಮೇಲೆ ನಿಲ್ಲುವಂತಾಗಬೇಕು ಎಂದು ನಿವೃತ್ತ ಪ್ರಾಚಾರ್ಯೆ ಪ್ರೊ. ಕವಿತಾ ಕಾಶಪ್ಪನವರ ಹೇಳಿದರು.

ಕರ್ನಾಟಕ ಕುರುಬರ ಮಹಿಳಾ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಸಂಘದಿಂದ ಅನೇಕ ಉತ್ತಮೋತ್ತಮ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ನೂರಾರು ಮಹಿಳೆಯರಿಗೆ ಉದ್ಯೋಗ ದೊರಕಿಸಿಕೊಡುವ ಯೋಜನೆ ಈ ಸಂಘ ಹೊಂದಿದೆ. ಹೊಂಬಳ ಗ್ರಾಮದ ಶಿಲ್ಪಾ ಹಂಡಿಯವರು ರೊಟ್ಟಿ ಮಾಡುವ ಯಂತ್ರದ ಸಹಾಯದಿಂದ ದಿನಕ್ಕೆ ಸಾವಿರಾರು ರೊಟ್ಟಿಗಳನ್ನು ಮಾಡತ್ತಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ ಎಂದರು.

ವೇದಿಕೆ ಮೇಲೆ ಗಂಗಾ ಚಕ್ರಣ್ಣವರ, ವಿಜಯಲಕ್ಷ್ಮೀ ಅನವಾಲದ, ಶ್ವೇತಾ ಕಾಶಪ್ಪನವರ, ಶಿಲ್ಪಾ ಹಂಡಿ ಮುಂತಾದವರು ಉಪಸ್ಥಿತರಿದ್ದರು. ಕನಕದಾಸರ ಕೀರ್ತನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಗಂಗಾ ಚಕ್ರಣ್ಣವರ ವಂದಿಸಿದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img