ಬೆಂಗಳೂರು:- ಯುವತಿಯೋರ್ವಳು ಟ್ರಾಫಿಕ್ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ ಘಟನೆ ಇಂದಿರಾನಗರ ಠಾಣಾ ವ್ಯಾಪ್ತಿಯ ESI ಆಸ್ಪತ್ರೆಯ ಜಂಕ್ಷನ್ ನಲ್ಲಿ ಜರುಗಿದೆ.
Advertisement
ಅಲ್ಲದೇ ಯುವತಿ ಬಾಡಿ ಕ್ಯಾಮರ ಎಳೆದಾಡಿ ಕಿರಿಕ್ ಕೂಡ ಮಾಡಿದ್ದಾಳೆ. ಯುವತಿ ಸೋನಂ ಎಂಬುವರಿಂದ ಹಲ್ಲೆ ನಡೆದಿದೆ. ಘಟನೆ ಹಿನ್ನೆಲೆ, ಇಂದಿರಾನಗರ ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸಲು ಪೊಲೀಸರು ತಯಾರಿ ನಡೆಸಿದ್ದಾರೆ.
ಮೊದಲು ಸವಾರನ ಜೊತೆ ಯುವತಿ ಕಿರಿಕ್ ತೆಗೆದಿದ್ದಾಳೆ. ಈ ವೇಳೆ ಸಂಚಾರಿ ಪೊಲೀಸರು ಎಂಟ್ರಿ ಕೊಟ್ಟಿದ್ದಾರೆ. ನಂತರ ಪೊಲೀಸರ ಮೇಲೆನೆ ಯುವತಿ ಹಲ್ಲೆಗೆ ಯತ್ನಿಸಿದ್ದಾಳೆ.
ಯುವತಿ ಸ್ವಲ್ಪ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ ಮಾಹಿತಿ ಲಭ್ಯವಾಗಿದೆ.