ಕಾಂಗ್ರೆಸ್ ಪಕ್ಷ ಸೇರಲು ನನಗೆ ತಲೆ ಕೆಟ್ಟಿದ್ಯಾ!? ಶಾಸಕ ಬೈರತಿ ಬಸವರಾಜ್ ಪ್ರಶ್ನೆ!

0
Spread the love

ಬಳ್ಳಾರಿ:- ಬಿಜೆಪಿಯ ಕೆಲ ಶಾಸಕರು ಕಾಂಗ್ರೆಸ್ ಸೇರುತ್ತಾರೆ ಎಂಬ ST ಸೋಮಶೇಖರ್ ಹೇಳಿಕೆ ವಿಚಾರ‌ವಾಗಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಶಾಸಕ ಬೈರತಿ ಬಸವರಾಜ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.

Advertisement

ಈ ಸಂಬಂಧ ಮಾತನಾಡಿದ ಅವರು, ST‌ ಸೋಮಶೇಖರ್ ತಮ್ಮ ಬೆಳೆ ಬೇಯಿಸಿಕೊಳ್ಳೋಕೆ ಹಿಂಗೆಲ್ಲಾ ಮಾತನಾಡುತ್ತಾರೆ. ಅಷ್ಟಕ್ಕೂ ಪಕ್ಷ ಸೇರುವವರ ಹೆಸರು ಗೊತ್ತಿದ್ರೆ ಬಹಿರಂಗವಾಗಿ ಹೇಳಲಿ.

ಏಳು – ಎಂಟು ಶಾಸಕರು ಹೋಗುತ್ತಾರೆ ಅಂತಾ ಹೇಳೋದಲ್ಲ. ನಾನೇಕೆ ಕಾಂಗ್ರೆಸ್‌ಗೆ ಹೋಗಲಿ. ನನ್ನ ತೆಲೆ ಕೆಟ್ಟಿದೆಯಾ. ಸೋಮಶೇಖರ್ ಕಾಂಗ್ರೆಸ್ ಪಕ್ಷದ ಮನವೊಲಿಕೆಗೆ ಹೀಗೆಲ್ಲಾ ಪ್ರಯತ್ನ ಮಾಡುತ್ತಿದ್ದಾರೆ ಎಂದು ಬೈರತಿ ಬಸವರಾಜ್ ಹೇಳಿಕೆ ನೀಡಿದ್ದಾರೆ.


Spread the love

LEAVE A REPLY

Please enter your comment!
Please enter your name here