ವಿಜಯಸಾಕ್ಷಿ ಸುದ್ದಿ, ಮೈಸೂರು
ಇಷ್ಟು ದಿವಸ ನಗರ ಪ್ರದೇಶಕ್ಕಷ್ಟೇ ಸೀಮಿತವಾಗಿದ್ದ ಸರಗಳ್ಳತನ ಇದೀಗ ಹಳ್ಳಿಗೂ ಕಾಲಿಟ್ಟಿದೆ.
ಧನುರ್ಮಾಸ ಪೂಜೆಗೆಂದು ದೇವಸ್ಥಾನಕ್ಕೆ ಹೋಗಿದ್ದ ಮಹಿಳೆಯ ಕೊರಳಲ್ಲಿದ್ದ ಚಿನ್ನದ ಸರವನ್ನು ಖದೀಮರು ಕಸಿದು ಪರಾರಿಯಾಗಿರುವ ಘಟನೆ ನಂಜನಗೂಡು ತಾಲ್ಲೂಕಿನ ಹಳ್ಳಿಕೆರೆಹುಂಡಿ ಗ್ರಾಮದಲ್ಲಿ ನಡೆದಿದೆ.
ಧನುರ್ಮಾಸ ಹಿನ್ನಲೆಯಲ್ಲಿ ವಿಮಲಾ ಎಂಬ ಮಹಿಳೆ ಗ್ರಾಮದ ಬಸವೇಶ್ವರಸ್ವಾಮಿ ದೇವಸ್ಥಾನಕ್ಕೆ ತೆರಳುತ್ತಿದ್ದರು. ಈ ವೇಳೆ ಪಲ್ಸರ್ ಬೈಕ್ ನಲ್ಲಿ ಬಂದ ಇಬ್ಬರು ಮುಸುಕುಧಾರಿಗಳು ಚಿನ್ನದ ಸರ ಕಿತ್ತುಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಸರ ಕಸಿಯುತ್ತಿರುವ ವೇಳೆ ಮಹಿಳೆ ಪ್ರತಿರೋಧವೊಡ್ಡಿದ್ದಾರೆ. ಆದರೆ, ಖದೀಮರು ಗೃಹಿಣಿಯನ್ನು ನೆಲಕ್ಕೆ ಬೀಳಿಸಿ 25 ಗ್ರಾಂ ಬಂಗಾರದ ಸರ
ಕದ್ದೊಯ್ದಿದ್ದಾರೆ.
ಈ ಕುರಿತು ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ Facebook । Twitter । YouTube ಅನುಸರಿಸಿ.